“ಯುವಜನತೆಯ ವ್ಯಕ್ತಿತ್ವ ವಿಕಸನಕ್ಕೆ ಜೇಸಿಐ ವೇದಿಕೆ ಕಲ್ಪಿಸುತ್ತದೆ”-ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ
ಉಪ್ಪಿನಂಗಡಿ:ಜೇಸಿಐ ಉಪ್ಪಿನಂಗಡಿ ಘಟಕದ 45 ನೇ ವರ್ಷದ ಪದಪ್ರಧಾನ ಕಾರ್ಯಕ್ರಮ ರೋಟರಿ ಭವನ ಉಪ್ಪಿನಂಗಡಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಲಯಾಧ್ಯಕ್ಷ ಜೇಸಿ ಪುರುಷೋತ್ತಮ ಶೆಟ್ಟಿ “ಯುವಜನತೆಯ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ವೇದಿಕೆಯನ್ನು ಜೇಸಿಐ ಕಲ್ಪಿಸುತ್ತದೆ ಎಂದರು. ಜೇಸಿ ಡಾಕ್ಟರ್ ರಾಜಾರಾಂ ಮಾತನಾಡಿ “ತರಬೇತಿ ಜೇಸಿಯ ಜೀವಾಳ.ಯುವಜನತೆಗೆ ಸೂಕ್ತ ರೀತಿಯಲ್ಲಿ ನಿರಂತರ ತರಬೇತಿ ಕಾರ್ಯಕ್ರಮ ಆಯೋಜಿಸಲು ವಲಯಕ್ಕೆ ಮನವಿ ಮಾಡಿದರು. ವಲಯ ಉಪಾಧ್ಯಕ್ಷರಾದ ಜೇಸೀ ದೇವರಾಜ್ ಕುತ್ಪಾಜೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷರು ಜೇಸಿ ಮೋಹನ್ ಚಂದ್ರ ತೋಟದ ಮನೆ ಯವರು ತನ್ನೊಡನೆ ಸಹಕರಿಸಿದ ಎಲ್ಲಾ ಜೇಸಿ ಮಿತ್ರರಿಗೆ ನೆನಪಿನ ಕಾಣಿಕೆಯನ್ನಿತ್ತು ಗೌರವಿಸಿದರು.
ನಿಕಟಪೂರ್ವ ಅಧ್ಯಕ್ಷ ಕೆ.ವಿ.ಕುಲಾಲ್ ರನ್ನು ಪೂರ್ವಾಧ್ಯಕ್ಷ ಸಾಲಿಗೆ ಗೋವಿಂದ ಪ್ರಸಾದ್ ಕಜೆ, ಗೌರವಾರ್ಪಣೆ ಮಾಡಿ ಸೇರಿಸಿದರು.
2023ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಕಿರುಪರಿಚಯ ಮತ್ತು ಹುದ್ದೆ ಹಸ್ತಾಂತರ ನೆರವೇರಿತು. ಘಟಕಕ್ಕೆ ಕಿರಣ್ ಗೌಂಡತ್ತಿಗೆ, ಸಂದೇಶ್ ಕಜೆಕಾರು, ಸಚಿನ್ ಗೌಂಡತ್ತಿಗೆ, ವಿಜಯ್ ಶಿಲ್ಪಿ ಕುಕ್ಕಾಜೆ ಮತ್ತು ತುಷಾರ್ ಸೇರಿದಂತೆ ಐದು ಮಂದಿ ನೂತನ ಸದಸ್ಯರು ಜೇಸಿಐಗೆ ಸೇರ್ಪಡೆಯಾದರು. ಉಪ್ಪಿನಂಗಡಿ ಘಟಕದ ನೂತನ ಅಧ್ಯಕ್ಷರಾದ ಜೇಸಿ ಶೇಖರ್ ಗೌಂಡತ್ತಿಗೆ ಅಧ್ಯಕ್ಷತೆ ವಹಿಸಿ, ನಿರ್ಗಮಿತ ಅಧ್ಯಕ್ಷ ಜೇಸಿ ಮೋಹನ್ ಚಂದ್ರ ತೋಟದ ಮನೆಯವರನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು. ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಅತ್ರಮಜಲು,ವಲಯ ಪೂರ್ವಾಧ್ಯಕ್ಷ ಅಶೋಕ್ ಚೂಂತಾರು, ವಲಯಾಧಿಕಾರಿ ಪ್ರದೀಪ್ ಬಾಕಿಲ, ವಿನೀತ್, ಪ್ರಜ್ವಲ್ ರೈ, ನಂದಕುಮಾರ್ ಪುತ್ತೂರು, ಉಪ್ಪಿನಂಗಡಿ ಸಿ.ಎ. ಬ್ಯಾಂಕಿನ ಮಾಜಿ ನಿರ್ದೇಶಕ ಅಜೀಜ್ ಬಸ್ತಿಕಾರ್, ಪುತ್ತೂರು ತಾಲೂಕು ಲ್ಯಾಂಪ್ಸ್ ಸಹಕಾರ ಸಂಘದ ಉಪಾಧ್ಯಕ್ಷ ಧರ್ಣಪ್ಪ ನಾಯ್ಕ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಪೆರಿಯಡ್ಕ ಅಧ್ಯಕ್ಷ ಸುರೇಶ್ ಗೌಂಡತ್ತಿಗೆ, ಕಾಮಧೇನು ಸಹಕಾರ ಸಂಘ ನೆಲ್ಯಾಡಿ ಅಧ್ಯಕ್ಷೆ ಶ್ರೀಮತಿ ಉಷಾ ಅಂಚನ್, ಆದಿಶಕ್ತಿ ಗೆಳೆಯರ ಬಳಗ ಅರ್ತಿಲ ಮಾಜಿ ಅಧ್ಯಕ್ಷ ಉದಯ, ಯುವವಾಹಿನಿ(ರಿ) ಉಪ್ಪಿನಂಗಡಿ ಅಧ್ಯಕ್ಷ ಕುಶಾಲಪ್ಪ ಹತ್ತು ಕಲಸೆ, ಪುತ್ತೂರು ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಉಮೇಶ್ ಶೆಣೈ, ವಿಕ್ರಮ ಮಂಡಲ ಕಾಂಚನ ಅಧ್ಯಕ್ಷ ಜೇಸಿ ಅನಿಲ್ ಪಿಂಟೊ, ಉಪಾಧ್ಯಕ್ಷ ಸಚಿನ್ ಮುದ್ಯ ಜೇಸಿಐ ಕೊಕ್ಕಡ ಅಧ್ಯಕ್ಷ ಜೇಸಿ ಶ್ರೀಧರ್, ನೆಲ್ಯಾಡಿ ಅಧ್ಯಕ್ಷೆ ಜಯಂತಿ, ಪುತ್ತೂರು ಅಧ್ಯಕ್ಷ ಶಶಿರಾಜ್, ಅಲಂಕಾರ್ ನಿಯೋಜಿತ ಅಧ್ಯಕ್ಷ
ಲಕ್ಷ್ಮಿನಾರಾಯಣ, ಸುಳ್ಯ ಅಧ್ಯಕ್ಷ ನವೀನ್ ಕುಮಾರ್, ಜೆಜೆಸಿ ಧನುಶ್ರೀ, ವಿಜಯಕುಮಾರ್ ಕಲ್ಲಳಿಕೆ, ರವೀಂದ್ರ ದರ್ಬೆ, ಪ್ರಶಾಂತ್ ಕುಮಾರ್ ರೈ, ಕೇಶವ ರಂಗಾಜೆ, ಉಮೇಶ ಆಚಾರ್ಯ, ಪುಷ್ಪರಾಜ್ ಶೆಟ್ಟಿ, ಶಶಿಧರ್ ನೆಕ್ಕಿಲಾಡಿ, ಮೋನಪ್ಪ ಪಮ್ಮನ ಮಜಲು, ಡಾ. ನಿರಂಜನ್ ರೈ, ಡಾ.ಆಶಿತ್, ಅವನೀಶ್, ಕುಶಾಲಪ್ಪ, ವಿಶ್ವನಾಥ್ ಕುಲಾಲ್ ಕರಾಯ,ಗುಣಾಕರ್, ಜಯಾನಂದ ಕಲ್ಲಾಪು, ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಜೇಸಿ ಮೋಹನ್ ಚಂದ್ರ ತೋಟದ ಮನೆ ಸ್ವಾಗತಿಸಿ, ಸುರೇಶ್ ವಂದಿಸಿದರು. ಚಂದ್ರಶೇಖರ್ ಶೆಟ್ಟಿ ಛಾಯಾಗ್ರಹಣದಲ್ಲಿ ಸಹಕರಿಸಿದರು.ಜೇಸಿ ದಿವಾಕರ ಜೇಸಿವಾಣಿ ವಾಚಿಸಿದರು.