ಅಂತರಾಷ್ಟ್ರೀಯ ಮಟ್ಟದ ಆನ್ಲೈನ್ ಯೋಗಾಸನ ಚಾಂಪಿಯನ್ ಶಿಪ್-2021 ಸ್ಪರ್ಧೆಗೆ ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನ ಆರಾಧ್ಯ ಎ.ರೈ ಆಯ್ಕೆ

ಶೇರ್ ಮಾಡಿ

ನೇಸರ ಡಿ.18: ನೆಲ್ಯಾಡಿ- ವರ್ಷಿಣಿ ಯೋಗ ಎಜುಕೇಶನ್ ಸ್ಪೋರ್ಟ್ಸ್ ಸೋಶಿಯಲ್ ಮತ್ತು ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ ಹುಬ್ಬಳ್ಳಿ ಇದರ ಸಹಯೋಗದಲ್ಲಿ ನಡೆಸಿದ ಅಂತರರಾಜ್ಯ ಆನ್ಲೈನ್ ಯೋಗಾಸನ ಚಾಂಪಿಯನ್ ಶಿಪ್, ನಿರಂತರ ಯೋಗ ಕೇಂದ್ರ ಸುಳ್ಯ ಈ ಸಂಸ್ಥೆಯಿಂದ ಅಂಡಮಾನ್ ನಲ್ಲಿ ನಡೆಯುವ ಯೋಗಾಸನ ಸ್ಪರ್ಧೆಗೆ 7ರ ವಯೋಮಾನ
ದ ಸ್ಪರ್ಧೆಗೆ ಆರಾಧ್ಯ ಎ.ರೈ ಆಯ್ಕೆಯಾಗಿದ್ದಾರೆ.

ಇವರು ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನ 2ನೇ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿ.ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು, ಇದೀಗ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಇವರಿಗೆ ತರಬೇತಿಯ ಹಾಗೂ ಮಾರ್ಗದರ್ಶನವನ್ನು ಶರತ್ ಮರ್ಗಿಲಡ್ಕ ನೀಡುತ್ತಿದ್ದಾರೆ.

ಇವರ ಸಾಧನೆಗೆ ವಿದ್ಯಾಸಂಸ್ಥೆಯ ಸಂಚಾಲಕರು, ಪ್ರಾಂಶುಪಾಲರು, ಅಧ್ಯಾಪಕ ವೃಂದ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಈಕೆ ಇಚಿಲಂಪಾಡಿ ಅವಿನಾಶ್ ರೈ ಹಾಗೂ ಸಂಧ್ಯಾ ಅವಿನಾಶ್ ರೈ ದಂಪತಿಯ ಪುತ್ರಿ.

Leave a Reply

error: Content is protected !!