“ನಾವು ನಮ್ಮ ನೈಜ ಇತಿಹಾಸವನ್ನು ಮರೆಯಬಾರದು” -ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ

ಶೇರ್ ಮಾಡಿ

ಪುತ್ತೂರು: ನಾವು ನಮ್ಮ ನಿಜವಾದ ಇತಿಹಾಸವನ್ನು ಮರೆಯಬಾರದು. ನಮ್ಮ ಸಂಸ್ಕೃತಿಯನ್ನು ಮರೆಮಾಚಲು ಬಿಡಬಾರದು. ನಮ್ಮ ತನವನ್ನು ನಾವುಗಳು ಮರೆತುಬಿಟ್ಟರೆ ಅಪಾಯ ತಪ್ಪಿದ್ದಲ್ಲ. ಈ ಹಿಂದೆ ನಾವು ತಪ್ಪಾದ ಇತಿಹಾಸವನ್ನು ಓದಿದ್ದರೆ ಅಂತಹ ಇತಿಹಾಸವನ್ನು ತಿದ್ದಿ ಮರುಷ್ಟಿಸಿ ಮುಂದಿನ ಪೀಳಿಗೆಯ ಮಕ್ಕಳಿಗೆ ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡಬೇಕು. ಯಾವ ವ್ಯಕ್ತಿ ಇತಿಹಾಸ ಮರಿಯುತ್ತಾನೋ ಅವನು ಇತಿಹಾಸ ಬರೆಯಲಾರ ಹಾಗೂ ನಮ್ಮ ಇತಿಹಾಸವನ್ನು ಭಾರತೀಯ ಪ್ರಜೆಗಳಾದ ನಾವು ಮರೆಯಬಾರದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಾಡಪಡಿತ್ತಾಯರವರು ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ( ಸ್ವಾಯತ್ತ)ಇದರ ಇತಿಹಾಸ ವಿಭಾಗ, ವಿವೇಕಾನಂದ ಸಂಶೋಧನ ಕೇಂದ್ರ ಮತ್ತು ಐಕ್ಯೂಎಸಿ ಘಟಕ ಹಾಗೂ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಹಯೋಗದಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು-ಆಧುನಿಕ ಯುಗದ ಅನುಭವಗಳ ವಿಶ್ಲೇಷಣೆ ಎನ್ನುವ ರಾಷ್ಟ್ರೀಯ ವಿಚಾರ ಸಂಕಿರಣ ಎಂಬ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.

ಈ ಕಾರ್ಯಕ್ರಮದ ದಿಕ್ಸೂಚಿ ಭಾಷಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ.ಲೋಕೇಶ್ ಕೆ.ಎಂ., ಮಾತನಾಡಿ ಇತಿಹಾಸವನ್ನು ನಾವು ತೆರೆದ ಮನಸ್ಸಿನಿಂದ ಓದಬೇಕು. ಎಲ್ಲಾ ಪ್ರದೇಶಗಳಿಗೂ ತನ್ನದೇ ಆದ ಇತಿಹಾಸವಿರುತ್ತದೆ. ನಾವು ಪ್ರಾದೇಶಿಕ ಇತಿಹಾಸಕ್ಕೆ ಅತೀ ಹೆಚ್ಚು ಒತ್ತನ್ನು ನೀಡಬೇಕು . ಅಮರ ಸುಳ್ಯ ಹೋರಾಟವು ಎರಡು ಜಿಲ್ಲೆಗಳ ಬೆಸುಗೆಗೆ ಕಾರಣವಾಗಿದೆ. ಇಂತಹ ಐತಿಹಾಸಿಕ ಹೋರಾಟ, ವಿಚಾರಗಳ ಬಗ್ಗೆ ನಾವು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ ಭಾರತ. ಭಾರತೀಯರ ಸಂಸ್ಕೃತಿ, ಆಚಾರ ವಿಚಾರಗಳನ್ನು ಬ್ರಿಟಿಷರು ಹೇಗೆ ಬದಲಾಯಿಸಿದರು ಎಂದು ಇತಿಹಾಸದ ಬಗ್ಗೆ ಅನೇಕ ವಿಚಾರಗಳನ್ನು ಮಾತನಾಡಿದರು. ಹೆಣ್ಣು ಮಕ್ಕಳು ದೇಶಕೋಸ್ಕರ ಹೋರಾಟ ಮಾಡಿದ ಹಾಗೂ ತಾಯಿಯನ್ನು, ಗೋಮಾತೆಯನ್ನು, ಹೆಣ್ಣು ದೇವರನ್ನು ಪೂಜೆ ಮಾಡುವಂತಹ ದೇಶವೆಂದರೆ ಅದು ಭಾರತ ಮಾತ್ರ ಹೊರತು ಬೇರೆ ಯಾವ ದೇಶವೂ ಅಲ್ಲ. ಎಲ್ಲದರಲ್ಲೂ ನಮ್ಮ ಸತ್ವಗಳನ್ನೊಳಗೊಂಡಿದೆ. ಇತಿಹಾಸದ ಪುಟಗಳನ್ನು ತೆರೆದು, ಓದಿ ಮತ್ತು ಅದನ್ನು ವಿಶ್ಲೇಷಣೆ ಮಾಡಬೇಕು. ಜಗತ್ತಿಗೆ ಮಂಗಳವನ್ನುಂಟು ಮಾಡಿದ ಚರಿತ್ರೆಯನ್ನು ಓದಿ ಜಗತ್ತಿಗೆ ಶಾಂತಿಯ ಸಾರವನ್ನು ನೀಡುವ ದೇಶದಲ್ಲಿ ಹುಟ್ಟಿದಂತಹ ನಾವು ಧನ್ಯರು ಅಂತಹ ಇತಿಹಾಸವನ್ನು ಓದಿ ನಾವು ನಮ್ಮ ತನವನ್ನು ಉಳಿಸಬೇಕೆಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿ ಕೃಷ್ಣ ಕೆ.ಎನ್.,ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ಸಂಯೋಜಕಿ ಡಾ.ಮೀನಾಕ್ಷಿ ಎಂ .ಎಂ.,ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ನಾಯಕ್ ಬಿ.,ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ.ಶಿವಪ್ರಸಾದ್ ಕೆ.ಎನ್., ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪರೀಕ್ಷಾಂಗ ಕುಲಸಚಿವ ಡಾ.ಎಚ್.ಜಿ . ಶ್ರೀಧರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಂಶುಪಾಲರಾದ ಡಾ.ಎಚ್.ಮಾಧವ ಭಟ್ ಹಾಗೂ ಪ್ರೊ.ಎ.ವಿ. ನಾರಾಯಣ, ಇತರ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು, ಬೋಧಕೇತರ ವೃಂದದವರು, ವಿವಿಧ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣುಗಣಪತಿ ಭಟ್ ಸ್ವಾಗತಿಸಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ.ಆರ್. ನಿಡ್ಪಳ್ಳಿ ವಂದಿಸಿ, ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಗೀತಾ ಕುಮಾರಿ ಟಿ. ಕಾರ್ಯಕ್ರಮವನ್ನು ನಿರೂಪಿಸಿದರು.

ಭವಿಷ್ಯಾ ಜೆ.ಕೆ.
ಪ್ರಥಮ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ(ಸ್ವಾಯತ್ತ)ಕಾಲೇಜು, ಪುತ್ತೂರು

Leave a Reply

error: Content is protected !!