ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಮಹಾಸಭೆ

ಶೇರ್ ಮಾಡಿ

ರಬ್ಬರ್ ಬೆಳೆಗಾರರ ಹಿತ ಕಾಪಾಡಲು ಬದ್ಧ: ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ.

ನೇಸರ ಡಿ.18: ನೆಲ್ಯಾಡಿ-ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ 2020-21ನೇ ಸಾಲಿನ ವಾರ್ಷಿಕ ಮಹಾಸಭೆ ಡಿ.18ರಂದು ಬೆಳಿಗ್ಗೆ ನೆಲ್ಯಾಡಿಯಲ್ಲಿರುವ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿಯವರು, ನೆಲ್ಯಾಡಿಯಲ್ಲಿ ಸಂಘದ ಕೇಂದ್ರ ಕಚೇರಿ ಇದ್ದು ಕಡಬ, ಪುತ್ತೂರು, ಈಶ್ವರಮಂಗಲದಲ್ಲಿ ಶಾಖೆಗಳಿಗೆ. ಇಚ್ಲಂಪಾಡಿ, ಕೆಯ್ಯೂರಿನಲ್ಲಿ ರಬ್ಬರ್ ಖರೀದಿ ಕೇಂದ್ರಗಳಿವೆ. ರಬ್ಬರ್ ಬೆಳೆಗಾರರು ಖಾಸಗಿಯವರ ಜೊತೆ ವ್ಯವಹಾರ ನಡೆಸದೇ ಸಹಕಾರ ಸಂಘದ ಜೊತೆಯೇ ವ್ಯವಹಾರ ಮಾಡಬೇಕು. ರಬ್ಬರ್ ಬೆಳೆಗಾರರ ಹಿತ ಕಾಪಾಡಲು ಸಹಕಾರ ಸಂಘವು ಬದ್ಧವಾಗಿದೆ ಎಂದರು.
ಸಂಘವು 2020-21ನೇ ಸಾಲಿನಲ್ಲಿ 29.47 ಕೋಟಿ ರೂ., ವಾರ್ಷಿಕ ವ್ಯವಹಾರ ನಡೆಸಿದೆ. 19,17,137.80 ಕೆ.ಜಿ.ರಬ್ಬರ್ ಶೀಟು ಹಾಗೂ ಸ್ಕ್ರಾಪ್ ರಬ್ಬರ್ ಖರೀದಿಸಿದೆ. ಕಚ್ಚಾ ರಬ್ಬರ್ ವ್ಯವಹಾರದಲ್ಲಿ 95 ಲಕ್ಷ ರೂ.,ಹಾಗೂ ರಬ್ಬರ್ ಕೃಷಿ ಸಲಕರಣೆ ಮತ್ತು ರಾಸಾಯನಿಕ ವ್ಯಾಪಾರದಲ್ಲಿ 16.59 ಲಕ್ಷ ರೂ., ಲಾಭಗಳಿಸಿದೆ. ಎಂಆರ್‌ಎಫ್ ಟಯರ್ ಕಂಪನಿ ಮತ್ತು ಇತರೇ ಕಂಪನಿಗಳೊಂದಿಗೆ ವ್ಯವಹಾರ ಮಾಡಿಕೊಂಡು ಸಂಘದ ರಬ್ಬರ್‌ಗೆ ಸ್ಥಿರವಾದ ಬೇಡಿಕೆ ಇರುವಂತೆ ನೋಡಿಕೊಂಡಿದ್ದೇವೆ. ರಬ್ಬರ್ ಧಾರಣೆಯಲ್ಲಿ ಏರಿಳಿತ ಹಾಗೂ ಕೋವಿಡ್ ಸಂಕಷ್ಟ ಸಂದರ್ಭದಲ್ಲೂ ಸಂಘವು ರಬ್ಬರ್ ಬೆಳೆಗಾರರಿಗೆ ಅತ್ಯುತ್ತಮ ಸೇವೆ ನೀಡಿ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದ್ದೇವೆ. ರಬ್ಬರ್ ಬೆಳೆಗಾರರೂ ಮುಂದೆಯೂ ಪ್ರೋತ್ಸಾಹ ನೀಡಬೇಕೆಂದು ಬಿ.ಪ್ರಸಾದ್ ಕೌಶಲ್ ಶೆಟ್ಟಿಯವರು ಹೇಳಿದರು.
ಇತ್ತೀಚೆಗೆ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸಿಡಿಎಸ್ ಬಿಪಿನ್ ರಾವತ್ ಹಾಗೂ ಇತರೇ ಸೈನಿಕರಿಗೆ 1 ನಿಮಿಷ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Leave a Reply

error: Content is protected !!