ನಿಡ್ಲೆ ಬಸ್ ಅಪಘಾತ: ಶೌರ್ಯ ವಿಪತ್ತು ತಂಡದ ಸ್ಪಂದನೆ

ಶೇರ್ ಮಾಡಿ

ನಿಡ್ಲೆ: ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಬೂಡುಜಾಲು ಸಮೀಪ ಕಾಲೇಜು ವಿದ್ಯಾರ್ಥಿಗಳ ಪ್ರವಾಸದ ಬಸ್ ಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದು ಬಸ್ ಚಾಲಕರ ಸಹಿತ ಸುಮಾರು 40 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಬುಧವಾರ ನಡೆದಿದ್ದು, ಪ್ರವಾಸಿಗರಿಗೆ ಹಾಗೂ ಗಾಯಾಳುಗಳಿಗೆ ಶೌರ್ಯ ವಿಪತ್ತು ತಂಡದ ಸದಸ್ಯರು ತುರ್ತು ಸಹಕಾರ ನೀಡಿದರು.

ಸಿಂಧನೂರು ತಾಲೂಕಿನಿಂದ ಸುಮಾರು 130 ವಿದ್ಯಾರ್ಥಿಗಳು ಮೂರು ಬಸ್ ಗಳಲ್ಲಿ ಪ್ರವಾಸ ಆಗಮಿಸಿದ್ದು ಅದರಲ್ಲಿ ಒಂದು ಬಸ್ ಅಪಘಾತವಾದ ಕಾರಣ ಸಮಸ್ಯೆ ಉಂಟಾಗಿತ್ತು.
ಈ ವಿದ್ಯಾರ್ಥಿಗಳಿಗೆ ಉಜಿರೆಯ ಶಾರದಾ ಮಂಟಪದಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಿ ಊಟದ ವ್ಯವಸ್ಥೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನಛತ್ರದಿಂದ ಮಾಡಲಾಗಿತ್ತು. ಇನ್ನು ಕೆಲವು ವ್ಯವಸ್ಥೆಗಳನ್ನು ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನ ಹಾಗೂ ಸಮಿತಿ ವತಿಯಿಂದ ಮಾಡಲಾಯಿತು.
ರಸ್ತೆ ಅಪಘಾತ ನಡೆದ ವೇಳೆ ಶೌರ್ಯ ವಿಪತ್ತು ತಂಡದ ಸ್ವಯಂಸೇವಕರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸೇರಿಸಲು ನೆರವಾದರು. ವಿದ್ಯಾರ್ಥಿಗಳಿಗೆ ರಾತ್ರಿ ಊಟದ ವ್ಯವಸ್ಥೆಯ ಬಳಿಕ ಅವರ ಊರಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಯಿತು.

ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜಯವಂತ ಪಟಗಾರ, ಶೌರ್ಯ ಸಮಿತಿಯ ಮಾಸ್ಟರ್ ಪ್ರಕಾಶ್, ಸಂಯೋಜಕರಾದ ಗಿರೀಶ್, ಸಂತೋಷ್ ಗೌಡ, ರವೀಂದ್ರ, ಧರ್ಮಸ್ಥಳ, ಉಜಿರೆ, ನಿಡ್ಲೆ ಘಟಕದ ಸ್ವಯಂ ಸೇವಕರು ಸಹಕಾರ ನೀಡಿದರು.

Leave a Reply

error: Content is protected !!