ಲಹರಿ ಸಂಗೀತ ಕಲಾ ಕೇಂದ್ರ ಐ ಐ ಸಿ ಟಿ ನೆಲ್ಯಾಡಿ ಇದರ ಪ್ರಥಮ ವಾರ್ಷಿಕೋತ್ಸವ “ರಾಗಾಂತರಂಗ”, ಲಹರಿ ಸಾಧಕ ರತ್ನ ಪ್ರಶಸ್ತಿ ಹಾಗೂ ಕಲಾ ಸಾಧಕರಿಗೆ ಸನ್ಮಾನ, ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಕೀಬೋರ್ಡ್ ವಾದನ ಮತ್ತು ಸುಗಮ ಸಂಗೀತ ಹಾಗೂ “ಪಂಡ ಕೇನುಜೆರ್” ತುಳು ಹಾಸ್ಯ ನಾಟಕ ಕಾರ್ಯಕ್ರಮದ









ನೆಲ್ಯಾಡಿ ಎಂಬುದು ವಿದ್ಯಾವಂತರ, ಪ್ರಜ್ಞಾವಂತರ ಹಾಗೂ ಎಲ್ಲಾ ಕಲೆಗಳನ್ನು ಪ್ರೋತ್ಸಾಹಿಸುವ ಪ್ರಜೆಗಳಿರುವ ಒಂದು ಪ್ರದೇಶ. ಒಂದು ಒಳ್ಳೆಯ ವಿದ್ಯೆಯನ್ನು ಕಲಿಸಲು ಹೃದಯ ಶ್ರೀಮಂತಿಕೆಯ ಗುರು ಅಗತ್ಯ ಅಂತ ಗುರುಗಳು ಇಂದು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಕಲಿಸುತ್ತಿದ್ದಾರೆ ಹಾಗೂ ಅವರ ಜೀವನದಲ್ಲಿ ಕಲೆಯನ್ನು ಬೆಳೆಸಿಕೊಂಡು ಶಾಂತಿಯನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ನೆಲ್ಯಾಡಿಯಲ್ಲಿ ನಡೆದ ಲಹರಿ ಸಂಗೀತ ಕಲಾ ಕೇಂದ್ರ ಐ ಐ ಸಿ ಟಿ ನೆಲ್ಯಾಡಿ ಇದರ ಪ್ರಥಮ ವಾರ್ಷಿಕೋತ್ಸವ “ರಾಗಾಂತರಂಗ”, ಲಹರಿ ಸಾಧಕ ರತ್ನ ಪ್ರಶಸ್ತಿ ಹಾಗೂ ಕಲಾ ಸಾಧಕರಿಗೆ ಸನ್ಮಾನ, ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಕೀಬೋರ್ಡ್ ವಾದನ ಮತ್ತು ಸುಗಮ ಸಂಗೀತ ಹಾಗೂ “ಪಂಡ ಕೇನುಜೆರ್” ತುಳು ಹಾಸ್ಯ ನಾಟಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ನೆಲ್ಯಾಡಿಯ ಜ್ಯೋತಿಷ್ಯರಾದ ಶ್ರೀಧರ್ ಗೋರೆ ಮಾತನಾಡಿದರು.

ವಿದ್ಯೆ ಕಲಿಯುವರೆಲ್ಲ ದೇವರ ಮಕ್ಕಳು, ಅದರಲ್ಲೂ ಸಂಗೀತ ಹಾಗೂ ಸಾಹಿತ್ಯವನ್ನು ಕಲಿಯುವ ಮಕ್ಕಳು ಸರಸ್ವತಿಯ ಮಕ್ಕಳು, ಸಂಗೀತವೆಂಬುದು ಪ್ರತಿಯೊಂದು ಜೀವಿಯ ಜೀವನದಲ್ಲಿ ಇದೆ ಹಾಗೂ ಮಾತು ಮಾತಿನಲ್ಲಿ ಸಂಗೀತವಿದೆ ಎಂದರು.


ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ:
ಕಾರ್ಯಕ್ರಮದಲ್ಲಿ ಸಂಗೀತ ಗುರುಗಳಾದ ಕುದ್ಮಾರ್ ವಿದ್ವಾನ್ ವೆಂಕಟರಮಣ್ ಕುಂಞಣ್ಣಾಯ, ಶಾಸ್ತ್ರೀಯ ಸಂಗೀತ ಗುರುಗಳಾದ ಕೊಕ್ಕಡ ಶ್ರೀಮತಿ ವಿದುಷಿ ಪದ್ಮಾವತಿ ವಿ ಬಾಳ್ತಿಲ್ಲಾಯ, ಯಕ್ಷಗಾನ ಭಾಗವತರಾದ ನೆಲ್ಯಾಡಿ ಲಕ್ಷ್ಮೀನಾರಾಯಣ ಶೆಟ್ಟಿ ಕುಂದಡ್ಕ, ಸಂಗೀತ ನಾಟಕ ನಿರ್ದೇಶಕರಾದ ದಯಾನಂದ ಆಚಾರ್ಯ ವಾಣಿಶ್ರೀ ನೆಲ್ಯಾಡಿ, ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿಯ ಕುಶಾಲಪ್ಪ ಹಾಗೂ ಲಹರಿ ಸಾಧಕ ರತ್ನ ಪ್ರಶಸ್ತಿ ಯನ್ನು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ನೆಲ್ಯಾಡಿಯ ದೈಹಿಕ ಶಿಕ್ಷಕ ಜನಾರ್ದನ ಟಿ ರವರಿಗೆ ನೀಡಿ ಸನ್ಮಾನಿಸಲಾಯಿತು.
ಸಂಗೀತ ಗುರುಗಳಾದ ವಿಶ್ವನಾಥ ಶೆಟ್ಟಿ ಕೆ., ಅವರನ್ನು ವಿದ್ಯಾರ್ಥಿಗಳು ಹಾಗೂ ಪಾಲಕರ ಪರವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದುರ್ಗಾಶ್ರೀ ನೆಲ್ಯಾಡಿ ಯ ಸತೀಶ್ ಕೆ.ಎಸ್ ವಹಿಸಿದ್ದರು,
ಸಭಾ ಕಾರ್ಯಕ್ರಮದ ಬಳಿಕ ಲಹರಿ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಕೀಬೋರ್ಡ್ ವಾದನ ಮತ್ತು ಸುಗಮ ಸಂಗೀತ, ತುಳು ನಾಟಕ ನಡೆಯಿತು.
ಕಾರ್ಯಕ್ರಮದಲ್ಲಿ ವಾರ್ಷಿಕೋತ್ಸವದ ಕಾರ್ಯದರ್ಶಿ ದಯಾಕರ ರೈ, ಕೋಶಾಧಿಕಾರಿ ವಿನೋದ್,ನಿರ್ದೇಶಕರಾದ ಪ್ರಶಾಂತ್ ಸಿ.ಎಚ್, ಗೌರವ ಸಲಹೆಗಾರರಾದ ಸುಧೀರ್ ಕುಮಾರ್ ಕೆ.ಎಸ್, ಸುರೇಶ್ ಪಡಿಪಂಡ, ಜಯಾನಂದ ಬಂಟ್ರಿಯಾಲ್, ವಿಶೇಷ ಆಹ್ವಾನಿತರಾದ ಡಾ.ಯತೀಶ್ ಕುಮಾರ್ ಸಂಯೋಜಕರು ಮತ್ತು ಸಹ ಪ್ರಾಧ್ಯಾಪಕರು ವಾಣಿಜ್ಯ ಸ್ನಾತಕೋತ್ತರ ವಿಭಾಗ ಮಂ.ವಿ.ವಿ ಕಾಲೇಜು ಹಂಪನಕಟ್ಟೆ ಮಂಗಳೂರು, ವೆಂಕಟರಮಣ ಆರ್ ಅಧ್ಯಕ್ಷರು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನೆಲ್ಯಾಡಿ ಲೀಜನ್, ಸಜಿ ಕುಮಾರ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೆಸ್ಕಾಂ ಕಡಬ, ಗುಡಪ್ಪ ಶೆಟ್ಟಿ, ನಿವೃತ್ತ ಉಪತಹಶೀಲ್ದಾರರು, ಜಯಂತಿ ಬಿ ಎಂ ಅಧ್ಯಕ್ಷರು ಜೆಸಿಐ ನೆಲ್ಯಾಡಿ, ಸುಬ್ರಹ್ಮಣ್ಯ ತೋಡ್ತಿಲ್ಲಾಯ, ದಿನಕರ ರಾವ್ ನಿವೃತ್ತ ಮುಖ್ಯ ಗುರುಗಳು, ಡಾ. ಅನೀಶ್ ಕುಮಾರ್ ಸಂಗೀತ ಗುರುಗಳು, ರವೀಂದ್ರ ಟಿ ನಿವೃತ್ತ ಮುಖ್ಯ ಶಿಕ್ಷಕರು, ಗಂಗಾಧರ ಶೆಟ್ಟಿ ಹೊಸಮನೆ ಹಾಗೂ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.
ಸಂಗೀತ ಗುರುಗಳಾದ ವಿಶ್ವನಾಥ ಶೆಟ್ಟಿ.ಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಜಯಾನಂದ ಬಂಟ್ರಿಯಾಲ್ ವಂದಿಸಿದರು., ಸುರೇಶ್ ಪಡಿಪಂಡ ಕಾರ್ಯಕ್ರಮ ನಿರೂಪಿಸಿದರು.