ನೆಲ್ಯಾಡಿ: ಯೂತ್ ಫ್ರೆಂಡ್ಸ್ ಕ್ಲಬ್ ಪಡುಬೆಟ್ಟು ಸ್ವಚ್ಛತೆಯ ಬಗ್ಗೆ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಕೆ

ಶೇರ್ ಮಾಡಿ

ನೆಲ್ಯಾಡಿ: ಯೂತ್ ಫ್ರೆಂಡ್ಸ್ ಕ್ಲಬ್ ಪಡುಬೆಟ್ಟು ಇದರ ವತಿಯಿಂದ ಪಡುಬೆಟ್ಟು ಶಾಲೆ ಮತ್ತು ಆಸುಪಾಸಿನ ಸ್ವಚ್ಛತೆಯ ಬಗ್ಗೆ ನೆಲ್ಯಾಡಿ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಯೂತ್ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಚೇತನ್ ಪಡುಬೆಟ್ಟು ಇವರು ಮನವಿ ಪತ್ರವನ್ನು ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಜಯಾನಂದ ಬಂಟ್ರಿಯಾಲ್, ಉಪಾಧ್ಯಕ್ಷರಾದ ಶಾಹಿರ್ ಪಡುಬೆಟ್ಟು ಮತ್ತು ಕಾರ್ಯದರ್ಶಿ ತೌಫೀಕ್ ಮತ್ತು ಸದಸ್ಯರಾದ ಮುರ್ಶಿದ್, ಝಿಯಾದ್ ಉಪಸ್ಥಿತರಿದ್ದರು.

Leave a Reply

error: Content is protected !!