ಸುಳ್ಯ: ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಸಾರುವ ಮೂರು ದಿನಗಳ ಜಗದ್ವಿಖ್ಯಾತ ಹಂಪಿ ಉತ್ಸವದ ವಿರುಪಾಕ್ಷೇಶ್ಬರ ವೇದಿಕೆಯಲ್ಲಿ ಜ.28 ರಂದು ನಡೆದ ಕವಿಗೋಷ್ಠಿಯಲ್ಲಿ ಸುಳ್ಯದ ಸಾಹಿತಿ ಡಾ.ಅನುರಾಧಾ ಕುರುಂಜಿಯವರು ಕವನ ವಾಚಿಸಿದರು.
ಹಂಪಿ ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿಯವರು ಉದ್ಘಾಟಿಸಿದ ಕವಿ ಗೋಷ್ಠಿಯ ಅಧ್ಯಕ್ಷತೆಯನ್ನು
ಸಾಹಿತಿ ಡಾ.ಹೆಚ್ ಟಿ ಪೋತೆ ವಹಿಸಿದ್ದರು. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 26 ಕವಿಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದರು.