ಪುತ್ತೂರು: ಇಲ್ಲಿನ ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಜೆಸಿಐ ಪುತ್ತೂರು ಹಾಗೂ ಲಯನ್ಸ್ ಕ್ಲಬ್ ಪುತ್ತೂರು ಸಹಯೋಗದೊಂದಿಗೆ ನೇತ್ರದಾನ ನೋಂದಣಿ, ಉಚಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ನಿರಂತರವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುವ 20ನೇ ಯೋಜನೆ ‘ಒಳಿತು ಮಾಡು ಮನುಷ’ ಕಾರ್ಯಕ್ರಮವು ಜ.30ರಂದು ಪುತ್ತೂರಿನ “ಸೈನಿಕ ಭವನ ರಸ್ತೆಯಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುತ್ತೂರು ಜೆಸಿಐನ ಅಧ್ಯಕ್ಷರಾದ ಸುಹಾಸ್ ಮರಿಕೆಯವರು ಮಾತನಾಡಿ, ಸೇವೆ ಜೀವನದ ಶ್ರೇಷ್ಠವಾದ ಕೆಲಸ, ನಾವು ಸಮಾಜಕ್ಕೆ ಒತ್ತು ಕೊಟ್ಟಾಗ ಅದು ಸೇವೆ ಆಗುತ್ತದೆ. ನಾವು ನಿಸ್ವಾರ್ಥದಲ್ಲಿ ಸೇವೆ ಮಾಡಿದಾಗ ಅದು ಸಮಾಜಕ್ಕೆ ಸೇವೆಯಾಗುತ್ತದೆ. ಸೇವೆಯು ಜೀವನದ ಪರಮ ದ್ಯೇಯ ಆಗಬೇಕು ಎಂದು ಶುಭಹಾರೈಸಿದರು.
ಇನೋರ್ವ ಮುಖ್ಯ ಅತಿಥಿಯಾಗಿ ಪುತ್ತೂರು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಕೇಶವ ನಾಯ್ಕ್ ರವರು ಮಾತನಾಡಿ, ಈ ಸಂಸ್ಥೆಯು ಉತ್ತಮವಾಗಿ ಬೆಳೆಯಲಿ, ಬಹಳ ಒಳ್ಳೆಯ ಕೆಲಸವನ್ನು ಮಾಡುತಿದ್ದರೆ. ಇನ್ನು ಒಳ್ಳೆಯ ಕೆಲಸ ಮಾಡಲಿ ಎಂದು ಹಾರೈಸುತ್ತ ಯಶಸ್ವಿನಿ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು, ಇದು ಹಲವಾರು ಜನರಿಗೆ ಪ್ರಯೋಜನವಾಗಿದೆ ಜೀವನದಲ್ಲಿ ಆರೋಗ್ಯ ಮುಖ್ಯವಾಗಿ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ 60,000 ಸಾವಿರ ಮೊತ್ತದ 60 ಆಹಾರ ಸಾಮಗ್ರಿಗಳ ಕಿಟ್ ವಿತರಣೆ, ಪ್ರತಿಭಾವಂತ ಹಗ್ಗಜಗ್ಗಾಟ ಆಟಗಾರದ ಕರಾಯ ಗ್ರಾಮದ ಹರೀಶ್ ನಾಯ್ಕ್ ಇವರಿಗೆ ಕಣ್ಣಿನ ಅರ್ನಿಯ ಚಿಕಿತ್ಸೆಗೆ 44 ನೇ ಯೋಜನೆಯಾಗಿ ರೂ.10,000/- ಮೊತ್ತದ ಚೆಕ್ ವಿತರಣೆ, ಕಿಡ್ನಿ ಸಮಸ್ಯೆಯಿಂದ ಬಳಲುತಿರುವ ಬಡಗನ್ನೂರಿನ ಕು.ಅನನ್ಯ ಇವರಿಗೆ ಒಂದು ತಿಂಗಳಿಗೆ ಬೇಕಾಗಿರುವ 2750/- ರೂಪಾಯಿಯ ಔಷಧಿ ವಿತರಣೆ. ಮಂಗಳೂರು ವಾಮಂಜೂರಿನ ಮಮತಾ ಇವರು ಕಿಡ್ನಿ ಸಮಸ್ಯೆಯಿಂದ ತೀರಿಹೋಗಿದ್ದು. ಅವರ ಕುಟುಂಬಕ್ಕೆ ರೂ. 2500/- ಸಾಂತ್ವನ ನಿಧಿಯ ಚೆಕ್ ವಿತರಣೆ, ದಾನಿಗಳು ನೀಡಿದ ವಸ್ತ್ರವನ್ನು ಅವಶ್ಯಕತೆ ಇರುವವರಿಗೆ ನೀಡಲಾಯಿತು ಹಾಗೂ 80 ಜನರಿಗೆ ಬಿಪಿ, ಸುಗರ್ ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜೆಸಿಐಯ ದಾಮೋದರ ಪಾಟಲಿ, ಮನೋಹರ್, ಲಯನ್ಸ್ ಕ್ಲಬ್ ನ ಗಣೇಶ್ ಶೆಟ್ಟಿ, ಶಿವ ಪ್ರಸಾದ್ ಹಾಗೂ ಟ್ರಸ್ಟ್ ನ ಪದಾಧಿಕಾರಗಳದ ಕಲಾವಿದ ಕೃಷ್ಣಪ್ಪ ಶಿವನಗರ ಪ್ರಧಾನ ಕಾರ್ಯದರ್ಶಿ ಮೋಹನ್ ಸಿಂಹವನ, ಸ್ಥಾಪಕ ಅಧ್ಯಕ್ಷರಾದ ಚೇತನ್ ಕುಮಾರ್ ಪುತ್ತೂರು, ಅಧ್ಯಕ್ಷರಾದ ಶ್ರೀಮತಿ ಶೋಭಾ ಮಡಿವಾಳ, ಶ್ರೀಮತಿ ಮಾಲಿನಿ, ಅಕ್ಷಯ ಕುಲಾಲ್, ಶ್ರೀಮತಿ ಪುಷ್ಪ ಬಂಡಾರಿ,ಶ್ರೀಮತಿ ವಸಂತಿ, ಶ್ರೀಮತಿ ಸರಸ್ವತಿ, ಶ್ರೀ ವಿಜಯ್ ಕುಮಾರ್ ಹಾಜರಿದ್ದರು.
ಪ್ರಾರ್ಥನೆಯನ್ನು ಕುಮಾರಿ ಯಕ್ಷಿತಾ ನೆರವೇರಿಸಿ ಕೊಟ್ಟರು, ಸ್ವಾಗತ ಶ್ರುತಿಕ, ಧನ್ಯವಾದ ಕುಮಾರಿ ಹರ್ಷಿತಾ ಹಾಗೂ ಯೋಜನಾಧಿಕಾರಿ ಕುಮಾರಿ.ಸೌಜನ್ಯ ಆರ್ಲಪದವು ಕಾರ್ಯಕ್ರಮವನ್ನು ನಿರೂಪಿಸಿದರು.