ಕಣಿಯೂರು: ಯುವಕೇಸರಿ ಕಣಿಯೂರು ಇದರ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್(ರಿ.)ಮಂಗಳೂರು ಹಾಗೂ ಬೆಳ್ತಂಗಡಿ ತಾಲೂಕು ಕಬಡ್ಡಿ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ ಪ್ರಪ್ರಥಮ ಬಾರಿಗೆ ಆಕರ್ಷಕ 6 ಅಡಿ ಎತ್ತರದ ಸ್ವಾತಂತ್ರ್ಯ ಹೋರಾಟಗಾರ ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಟ್ರೋಪಿ -2023, ಮ್ಯಾಟ್ ಅಂಕಣದ ಪ್ರೊ ಮಾದರಿಯ ಹೊನಲು ಬೆಳಕಿನ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ. ಫೆ.04 ಶನಿವಾರ ಸಂಜೆ 4.30 ಕ್ಕೆ ಕಣಿಯೂರು ಕ್ರೀಡಾಂಗಣದಲ್ಲಿ ನಡೆಯಲಿದೆ.
ರೈತಬಂಧು ಆಹಾರೋದ್ಯಮದ ಮಾಲಕರಾದ ಶಿವಶಂಕರ್ ನಾಯಕ್ ಕಾರ್ಯಕ್ರಮದ ಉದ್ಘಾಟನೆ ನೇರವೆರಿಸಲಿದ್ದಾರೆ. ಅನೇಕ ಗಣ್ಯರು ಭಾಗವಹಿಸಿಲಿದ್ದಾರೆ.
ಇದೇ ಸಂಧರ್ಭದಲ್ಲಿ ವಲಯ ಮಟ್ಟದ ಕಬಡ್ಡಿ ಪಂದ್ಯಾಟ ಆರಂಭಗೊಳ್ಳಲಿದೆ.
ರಾತ್ರಿ 8.0 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಯುವ ನಾಯಕ, ಅಭಿವೃದ್ಧಿಯ ಹರಿಕಾರ ಶಾಸಕ ಸನ್ಮಾನ್ಯ ಹರೀಶ್ ಪೂಂಜ, ಶಶಿಧರ ಶೆಟ್ಟಿ ನವಶಕ್ತಿ ಅಧ್ಯಕ್ಷರು ತುಳುಕೂಟ ಬರೋಡ, ಕೇಶವ ಬಂಗೇರ ಉಪನ್ಯಾಸಕರು ನಾರಾಯಣಗುರು ಕಾಲೇಜು,ಮಂಗಳೂರು, ಕುಶಾಲಪ್ಪ ಗೌಡ ಪೂವಾಜೆ ಅಧ್ಯಕ್ಷರು ವಾಣಿ ಶಿಕ್ಷಣ ಸಂಸ್ಥೆಗಳು ಬೆಳ್ತಂಗಡಿ, ಜಯಂತ ಕೋಟ್ಯಾನ್ ಅಧ್ಯಕ್ಷರು ಭಾ.ಜ.ಪ ಬೆಳ್ತಂಗಡಿ ಮಂಡಲ, ಕಿರಣ್ ಬಡ್ಲೆಗುತ್ತು ಅಧ್ಯಕ್ಷರು ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸಮಿತಿ, ಮಂಗಳೂರು ಹಾಗೂ ಇನ್ನು ಅನೇಕ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ವಿವಿಧ ಸಾಧಕರಿಗೆ ಸನ್ಮಾನ, ಚೆಂಡೆವಾದನ, ವಿದ್ಯುತ್ ದೀಪಗಳೊಂದಿಗೆ ಭವ್ಯವಾದ ಮೆರವಣಿಗೆಯ ಮೂಲಕ ಅದ್ದೂರಿ ಕಾರ್ಯಕ್ರಮ ನೇರವೆರಲಿದೆ.
ವಿಶೇಷ ಆಕರ್ಷಣೆಯಾಗಿ ಪ್ರಸಿದ್ದ ಪ್ರೋ ಕಬಡ್ಡಿ ಆಟಗಾರರ ಆಗಮನವಾಗಲಿದೆ ಅವರ ಅದ್ಬುತ ಪ್ರದರ್ಶನ ಜನಮನಸೂರೆಗೊಳ್ಳಲಿದೆ. ಮರುದಿನ ಬೆಳಗ್ಗೆ ಸಮಾರೋಪ ಸಮಾರಂಭ ನಡೆಯಲಿದೆ.
ಕ್ರೀಡಾಭಿಮಾನಿಗಳಿಗೆ ಆತ್ಮೀಯವಾಗಿ ಆಮಂತ್ರಿಸಿದ್ದಾರೆ ಯುವ ಕೇಸರಿ ಕಣಿಯೂರು ಇದರ ಗೌರವಾಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಅಧ್ಯಕ್ಷರಾದ ಪ್ರವೀಣ್ ಗೌಡ ಅಲೆಕ್ಕಿ, ಕಾರ್ಯದರ್ಶಿ ವಕೀಲರಾದ ಯತೀಶ್ ಶೆಟ್ಟಿ ಪಣೆಕ್ಕರ ಪ್ರಕಟಣೆ ತಿಳಿಸಿದ್ದಾರೆ.