ಕೊಕ್ಕಡ ಅಮೃತ ಗ್ರಾಮ ಪಂಚಾಯತ್ ಉದ್ಯೋಗ ಖಾತರಿ ಯೋಜನೆಯಲ್ಲಿ ಕಳಂದೂರು ಮೂಲಕ ಹರಿಯುವ ತೋಡುಗಳ ಹೂಳು ಎತ್ತುವ ಕಾರ್ಯಕ್ಕೆ ಚಾಲನೆಯನ್ನು ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯೋಗೀಶ್ ಆಳಂಬಿಲ ನೀಡಿದರು.
ತೋಡಿನ ಹೂಳು ಎತ್ತುವ ಕೆಲಸವನ್ನು ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರು ಹಾಗೂ ಮಹಿಳೆಯರ ಸಹಕಾರದಿಂದ ನೆರವೇರಿತು.
ಈ ಸಂದರ್ಭ ಮಾತನಾಡಿದ ಪಂಚಾಯತ್ ಅಧ್ಯಕ್ಷರು ಗ್ರಾಮದಲ್ಲಿ ಮಳೆ ನೀರು ಹರಿಯುವ ಬೈಲು ತೋಡುಗಳ ದುರಸ್ಥಿ ಗದ್ದೆ ಬೇಸಾಯ ಮಾಡುವ ಸಂದರ್ಭ ಎಲ್ಲಾ ರೈತರು ತೋಡುಗಳ ದುರಸ್ಥಿ ಮಾಡುತ್ತಿದ್ದರು.ಈಗ ಗದ್ದೆ ಇದ್ದ ಜಾಗದಲ್ಲೂ ವಾಣಿಜ್ಯ ಕೃಷಿ ಬೆಳೆಯುವುದರಿಂದ ತೋಡುಗಳ ದುರಸ್ಥಿ ಆಗದೇ ಹೂಳು ತುಂಬಿ ಅಂತರ್ಜಾಲ ಕುಸಿತ ಆಗುತಿದೆ. ಅಲ್ಲದೆ ಕೃಷಿ ಜಾಗಕ್ಕೂ ಸಮಸ್ಯೆ ಎದುರಾಗುತ್ತದೆ. ಮುಂದೆ ದೊಡ್ಡ ಸಮಸ್ಯೆ ಬರುವ ಮುಂಚೆ ಜನತೆ ಜಾಗೃತಿಗಾಗಿ ಈ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಉಪಾಧ್ಯಕ್ಷರಾದ ಶ್ರೀಮತಿ ಪವಿತ್ರ, ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಜಾನಕಿ, ಶ್ರೀಮತಿ ಲತಾ, ಶ್ರೀಮತಿ ವನಿತಾ ಪುರಷೋತ್ತಮ ಉಪಸ್ಥಿತರಿದ್ದರು.