ಆಲಂಕಾರು: ಕಡಬ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರು ಇಲ್ಲಿಗೆ ವಿವೇಕ ಯೋಜನೆಯಡಿಯಲ್ಲಿ ಮಂಜೂರಾಗಿರುವ ರೂ. 26 ಲಕ್ಷ ಮೊತ್ತದ ತರಗತಿ ಕೊಠಡಿಗಳಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ಇಂದು ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಆಲಂಕಾರು ಗ್ರಾ.ಪಂ.ಅಧ್ಯಕ್ಷರಾದ ಸದಾನಂದ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗನ್ನಾಥ್ ಶೆಟ್ಟಿ, ಪ್ರಮುಖರಾದ ಪ್ರದೀಪ್ ರೈ ಮನವಳಿಕೆ, ಪೂವಪ್ಪ ನಾಯ್ಕ ಶಾಂತಿಗುರಿ, ಶಾಲಾ ಮುಖ್ಯಗುರುಗಳಾದ ನಿಂಗರಾಜು ಕೆ.ಪಿ. ಸೇರಿದಂತೆ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.