ರಕ್ತಕ್ಕೆ ಯಾವುದೇ ಜಾತಿ, ಧರ್ಮ, ಮತ ಇಲ್ಲ, ರಕ್ತಕ್ಕೆ ಇರುವುದು ಕೇವಲ ಗ್ರೂಪ್ ಮಾತ್ರ -ಪ್ರವೀಣ್ ಕುಮಾರ್

ಶೇರ್ ಮಾಡಿ

ಡಾ.ಜೈನಿ ಶಾಜಿ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ

ನೆಲ್ಯಾಡಿ: ಸಿಟಿ ಫ್ರೆಂಡ್ಸ್ ನೆಲ್ಯಾಡಿ, ಲೇಡಿಗೋಷನ್ ಆಸ್ಪತ್ರೆ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಡಾ.ಜೈನಿ ಶಾಜಿ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಫೆಬ್ರವರಿ 14ರಂದು ಇಲೈಟ್ ಬಿಲ್ಡಿಂಗ್ ನೆಲ್ಯಾಡಿಯಲ್ಲಿ ಜರಗಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಅನ್ನಮ್ಮ ವರ್ಗೀಸ್ ರವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶಿಶಿರ ವಹಿಸಿ ಮಾತನಾಡಿದ ಅವರು ದಾನದಲ್ಲಿ ಅತ್ಯಂತ ಶ್ರೇಷ್ಠವಾದ ದಾನ ರಕ್ತದಾನ. ರಕ್ತದಾನ ಮಾಡುವುದರ ಮೂಲಕ ಒಂದು ಜೀವವನ್ನು ಉಳಿಸುವಂತಹ ಮಹತ್ವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು ಎಂದು ತಿಳಿಸಿದರು.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಜಿಲ್ಲಾ ಸಂಯೋಜಕರಾದ ಪ್ರವೀಣ್ ಕುಮಾರ್ ಮಾತನಾಡಿ ರಕ್ತಕ್ಕೆ ಯಾವುದೇ ಜಾತಿ, ಧರ್ಮ, ಮತ ಇಲ್ಲ, ರಕ್ತಕ್ಕೆ ಇರುವುದು ಕೇವಲ ಗ್ರೂಪ್ ಮಾತ್ರ. ಯಾವುದೇ ರೀತಿಯ ಕೋಮು ಭಾವನೆ ಜನರಲ್ಲಿ ಇರಬಾರದು ಯಾಕೆಂದರೆ ರಕ್ತದ ಅವಶ್ಯಕತೆ ಬಂದಾಗ ಯಾವುದೇ ಜಾತಿಯ ವ್ಯಕ್ತಿಯ ರಕ್ತವು ಆಗುತ್ತದೆ. ಭವ್ಯ ಭಾರತದ ಸಹಬಾಳ್ವೆ, ಸಹ ಧರ್ಮಕ್ಕೆ ರಕ್ತದಾನ ಒಂದು ಭದ್ರ ಬುನಾದಿಯಾಗಿದೆ. ರಕ್ತದಾನ ಶಿಬಿರವು ನಿರಂತರವಾಗಿ ನಡೆಯುತ್ತಿರಬೇಕು ಎಂದು ಈ ಸಂದರ್ಭದಲ್ಲಿ ನುಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನೆಲ್ಯಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಚೇತನಾ, ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಮುರಳೀಧರ, ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವನಿತಾ ದಿನೇಶ್ ಪೂಜಾರಿ, ನೆಲ್ಯಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಮಂಜುಳಾ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಬಾಲಕೃಷ್ಣ ಬಾಣಜಾಲು, ನೆಲ್ಯಾಡಿ ಇಲೈಟ್ ಗ್ರೂಫ್ ಮಾಲಕ ಶಾಜಿ ವರ್ಗೀಸ್, ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್, ನೆಲ್ಯಾಡಿ ಬಿ.ಜೆ.ಎಂ ಅಧ್ಯಕ್ಷ ನೋಟರಿ ವಕೀಲ ರಾದ ಇಸ್ಮಾಯಿಲ್ ಎನ್, ಕೆ.ಪಿ ತೋಮಸ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

38 ಬಾರಿ ರಕ್ತದಾನ ಮಾಡಿದ ಜೋಸ್ ಕೆ.ಜೆ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಾರ್ವಜನಿಕರು, ನೆಲ್ಯಾಡಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ನೆಲ್ಯಾಡಿ ಬೆಥನಿ ಐಟಿಐ ಹಾಗೂ ಪದವಿ ವಿದ್ಯಾರ್ಥಿಗಳು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.
107 ಯುನಿಟ್ ರಕ್ತ ಸಂಗ್ರಹಿಸಲಾಯಿತು.

ನೆಲ್ಯಾಡಿ ಇಲೈಟ್ ಗ್ರೂಫ್ ಮಾಲಕ ಶಾಜಿ ವರ್ಗೀಸ್ ಸ್ವಾಗತಿಸಿ, ಕೌಕ್ರಾಡಿ ಗ್ರಾಮ ಪಂಚಾಯಿತಿನ ಸದಸ್ಯರಾದ ಲೋಕೇಶ್ ಬಾಣಜಾಲು ವಂದಿಸಿದರು. ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಶಿಕ್ಷಕಿ ಶ್ರೀಮತಿ ಜೆಸಿಂತಾ ನಿರೂಪಿಸಿದರು.

Leave a Reply

error: Content is protected !!