2023-24ರ ಸಾಲಿನ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಿಕ್ಕಿದ್ದೇನು?

ಶೇರ್ ಮಾಡಿ

ಬೆಂಗಳೂರು: ರೈತರ ಮಕ್ಕಳಿಗೆ ಮೀಸಲಾಗಿದ್ದ ರೈತ ವಿದ್ಯಾನಿಧಿಯನ್ನು ಮೀನುಗಾರರು ಮತ್ತು ನೇಕಾರರಿಗೂ ವಿಸ್ತರಿಸಲಾಗಿದೆ. ಮೂರು ಲಕ್ಷ ವಿದ್ಯಾರ್ಥಿಗಳಿಗೆ 141 ಕೋಟಿ ರೂಪಾಯಿ ಅನುದಾನ ನೀಡಲಾಗುವುದು.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಇದಕ್ಕಾಗಿ 350 ಕೋಟಿ ರೂ ವೆಚ್ಚ ಮಾಡಲಾಗುವುದು. ಮಕ್ಕಳ ಬಸ್ ಯೋಜನೆ ಆರಂಭ
ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಆರಂಭ ಮಾಡಲಾಗುವುದು. ಈ ಮೂಲಕ ಸರ್ಕಾರಿ ಪದವಿ ಕಾಲೇಜಿನಲ್ಲಿ ಶುಲ್ಕ ವಿನಾಯತಿ ನೀಡಲಾಗುವುದು. ಉಚಿತ ಉನ್ನತ ಶಿಕ್ಷಣ ಯೋಜನೆ ಜಾರಿ ಮಾಡಲಾಗುವುದು. ಇದರಿಂದ 8 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ.
9556 ಶಾಲಾ ಕೊಠಡಿ ನಿರ್ಮಾಣ ಮಾಡಲಾಗುವುದು, ಎಲ್ಲಾ ವಿವಿಗಳಲ್ಲಿ ಕನ್ನಡ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗುವುದು. 47 ವಸತಿ ಶಾಲೆಗಳ ದುರಸ್ಥಿ ಮತ್ತು ಸ್ಮಾರ್ಟ್ ಕ್ಲಾಸ್, 30 ಕಸ್ತೂರ್ ಬಾ ಗಾಂಧಿ ವಸತಿ ಶಾಲೆಗಳನ್ನು ಹೈಟೆಕ್ ಗೇರಿಸಲಾಗವುದು.
ಸೃಷ್ಟಿ ಟಿಂಕರಿಂಗ್ ಪ್ರಯೋಗಾಲಯಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.

Leave a Reply

error: Content is protected !!