ಆನೆ ದಾಳಿಯಿಂದ ಮೃತಪಟ್ಟವರ ಮನೆ ಸಚಿವ ಅಂಗಾರ ಭೇಟಿ

ಶೇರ್ ಮಾಡಿ

ಕಡಬ: ಆನೆ ದಾಳಿಯಂದ ಮೃತಪಟ್ಟ ರೆಂಜಲಾಡಿ ಗ್ರಾಮದ ನೈಲ ರಂಜಿತಾ ಹಾಗೂ ರಮೇಶ್ ರೈ ಅವರ ಮನೆಗೆ ಬಂದರು ಮೀನುಗಾರಿಕೆ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಭೇಟಿ ನೀಡಿ ಸಾಂತ್ವನ ಹೇಳಿದರು.

ಸಚಿವರ ಆಗಮನವಾಗುತ್ತಿದ್ದಂತೆ ಮನೆಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿ ಕಳೆದ ಕೆಲವು ತಿಂಗಳಿಂದ ಆನೆಗಳ ಹಾವಳಿಯ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ಆದರೆ ಯಾರೂ ಸರಿಯಾದ ಕ್ರಮ ಕೈಗೊಂಡಿಲ್ಲ. ನೀವು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುತ್ತಿದ್ದರೆ ನನ್ನ ಮಗಳ ಪ್ರಾಣ ಉಳಿಯುತ್ತಿತ್ತು ಎಂದು ಮೃತಳ ತಾಯಿ ಅವಲತ್ತುಕೊಂಡರು.

ಬಳಿಕ ಪತ್ರಕರ್ತರೊಂದಿಗೆ ಮತನಾಡಿದ ಸಚಿವರು ನನ್ನ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಆನೆಗಳ ಉಪಟಳ ಇದೆ, ಅದರಲ್ಲೂ ಕಡಬ ಭಾಗದಲ್ಲಿ ಹೆಚ್ಚಿದೆ. ಇಲ್ಲಿರುವ ಕಾಡಾನೆಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಸರಕಾರದ ಗಮನಕ್ಕೆ ತಂದಿದ್ದೇನೆ. ಇದೀಗ ಆನೆಗಳ ಸ್ಥಳಾಂತರಕ್ಕೆ ಸರಕಾರದ ಮಟ್ಟದಲ್ಲಿ ಅನುಮತಿ ಸಿಕ್ಕಿದೆ. ತಕ್ಷಣ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿದ್ದಾರೆ.
ಮೃತರ ಕುಟುಂಬಕ್ಕೆ ತಲಾ 15 ಲಕ್ಷ ರೂ ಪರಿಹಾರ ನೀಡಲಾಗುವುದು. ತಕ್ಷಣಕ್ಕೆ ಐದು ಲಕ್ಷ ರೂ ಇಂದೇ ನೀಡಲಾಗುವುದು ಎಂದರು. ಸಚಿವರೊಂದಿಗೆ ಬಿಜೆಪಿ ಮುಖಂಡರಾದ ಕೃಷ್ಣ ಶೆಟ್ಟಿ ಕಡಬ, ರಾಕೇಶ್ ರೈ ಕೆಡೆಂಜಿ, ಪುಲಸ್ಯ ರೈ, ಸುರೇಶ್ ಗೌಡ ದೇಂತಾರು, ಉಮೇಶ್ ಶೆಟ್ಟಿ ಸಾಯಿರಾಂ, ಅಜಿತ್ ಆರ್ತಿಲ ಮತ್ತಿತರರು ಉಪಸ್ಥಿತರಿದ್ದರು.

ಐದು ಲಕ್ಷ ಪರಿಹಾರ ವಿತರಣೆ:

ಸಂಜೆ ಮತ ರಂಜಿತಾ ಮನೆಗೆ ಬೇಟಿ ನೀಡಿದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕ್ಕಳನ್ ಐದು ಲಕ್ಷ ರೂ ನ ಚೆಕ್ ವಿತರಿಸಿದರು. ಮೃತ ರಮೇಶ್ ರೈ ಅವರಿಗೆ ಯಾರೂ ವಾರಿಸುದಾರರು ಇಲ್ಲದ ಕಾರಣ ತಾಂತ್ರಿಕ ಕಾರಣಕ್ಕಾಗಿ ಮುಂದೆ ಪರಿಹಾರ ನೀಡುವುದಾಗಿ ಅವರು ತಿಳಿಸಿದರು.

See also  ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕೃಷಿ ಭೂಮಿಗೆ ಬೆಂಕಿ

Leave a Reply

Your email address will not be published. Required fields are marked *

error: Content is protected !!