ಬಂಟ್ವಾಳ: ಬಂಟ್ವಾಳ ತಾಲೂಕಿನ 4 ಕಡೆಗಳಲ್ಲಿ ಗುಡ್ಡ ಹಾಗೂ ಅರಣ್ಯ ಪ್ರದೇಶಕ್ಕೆ ಶುಕ್ರವಾರ ಬೆಂಕಿ ಬಿದ್ದಿರುವ ಘಟನೆ ನಡೆದಿದ್ದು, ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ.
ತಲಪಾಡಿ ಹೆದ್ದಾರಿ ಬದಿ ಗುಡ್ಡಕ್ಕೆ ಬೆಂಕಿ ಬಿದ್ದು, ಗಿಡ ಗಂಟಿಗಳ ಜತೆಗೆ ಹುಲ್ಲು ಪ್ರದೇಶ ಸುಟ್ಟು ಹೋಗಿದೆ. ಮೊಡಂಕಾಪು ಪ್ರದೇಶದಲ್ಲಿ ಅರಣ್ಯ ವ್ಯಾಪ್ತಿಗೆ ಬೆಂಕಿ ಬಿದ್ದು, ಗಿಡಗಂಟಿಗಳು ಸುಟ್ಟು ಹೋಗಿವೆ. ಸರಪಾಡಿಯಲ್ಲಿ ಗುಡ್ಡ ಪ್ರದೇಶಕ್ಕೆ ಬೆಂಕಿ ಬಿದ್ದು, ಪುಂಜಾಲಕಟ್ಟೆ ಭಾಗದಲ್ಲಿ ರಬ್ಬರ್ ತೋಟಕ್ಕೆ ಬೆಂಕಿ ಬಿದ್ದು ರಬ್ಬರ್ ಗಿಡಗಳು ನಾಶವಾಗಿದೆ.
ಘಟನ ಸ್ಥಳಗಳಿಗೆ ಬಂಟ್ವಾಳ ಹಾಗೂ ಮಂಗಳೂರು ಅಗ್ನಿಶಾಮಕ ಠಾಣೆಯ ವಾಹನಗಳು ತೆರಳಿದ್ದು, ಬಂಟ್ವಾಳದಲ್ಲಿ ಒಂದೇ ವಾಹನ ಇರುವುದರಿಂದ ಹೆಚ್ಚುವರಿಯಾಗಿ ಮಂಗಳೂರಿನ ವಾಹನ ಆಗಮಿಸಿತ್ತು.