ಇನ್ನು ಬ್ಯಾಂಕ್‌ನಲ್ಲಿ ಐದೇ ದಿನ ಕೆಲಸ!

ಶೇರ್ ಮಾಡಿ

ಸದ್ಯದಲ್ಲೇ ದೇಶದ ಬ್ಯಾಂಕಿಂಗ್‌ ವಲಯದ ಕೆಲಸದ ಅವಧಿಯಲ್ಲಿ ಬಹುದೊಡ್ಡ ಬದಲಾವಣೆ ಆಗಲಿದ್ದು, ವಾರಕ್ಕೆ ಐದೇ ದಿನ ಕೆಲಸದ ವ್ಯವಸ್ಥೆ ಜಾರಿಯಾಗಲಿದೆ.
ಈಗಾಗಲೇ ಭಾರತೀಯ ಬ್ಯಾಂಕ್‌ ಅಸೋಸಿಯೇಶನ್‌ ಮತ್ತು ಯುನೈಟೆಡ್‌ ಫೋರಮ್‌ ಆಫ್ ಬ್ಯಾಂಕ್‌ ಎಂಪ್ಲಾಯೀಸ್‌ ನಡುವೆ ಮಾತುಕತೆ ಆರಂಭವಾಗಿದೆ. ಮೂಲಗಳು ಹೇಳಿರುವಂತೆ ಬ್ಯಾಂಕ್‌ ಅಸೋಸಿಯೇಶನ್‌, ವಾರದಲ್ಲಿ ಐದು ದಿನಗಳ ಕೆಲಸಕ್ಕೆ ತಾತ್ವಿಕ ಒಪ್ಪಿಗೆಯನ್ನೂ ನೀಡಿದೆ.

ಸದ್ಯ ತಿಂಗಳಲ್ಲಿ ಎರಡು ವಾರ ಮಾತ್ರ ಬ್ಯಾಂಕ್‌ ಉದ್ಯೋಗಿಗಳಿಗೆ ಐದು ದಿನದ ಕೆಲಸವಿದೆ. ಅಂದರೆ ಪರ್ಯಾಯ ವಾರದಲ್ಲಿ ಈ ರೀತಿ ಬರುತ್ತದೆ. ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಉದ್ಯೋಗಿಗಳಿಗೆ ರಜೆ ಇರಲಿದೆ. ಈಗ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ತಿಂಗಳ ಎಲ್ಲ ಶನಿವಾರಗಳಲ್ಲಿಯೂ ರಜೆ ನೀಡಲು ಮುಂದಾಗಿದೆ.

ಹೇಗೆ ಬದಲಾವಣೆ?
ಶನಿವಾರದ ರಜೆ ಬದಲಿಗೆ ಇತರ ದಿನಗಳಲ್ಲಿ 40ರಿಂದ 50 ನಿಮಿಷ ಹೆಚ್ಚುವರಿ ಕೆಲಸ.
ದಿನದ ಕೆಲಸದ ಅವಧಿಯೂ ಬದಲು (ಬೆಳಗ್ಗೆ 9.45ರಿಂದ ಸಂಜೆ 5.30)
ಸದ್ಯ ತಿಂಗಳಲ್ಲಿ ಎರಡು ಶನಿವಾರ ಮಾತ್ರ ರಜೆ ಇದೆ.

Leave a Reply

error: Content is protected !!