ಉಪ್ಪಿನಂಗಡಿ: ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಉಪ್ಪಿನಂಗಡಿಯಲ್ಲಿ ಉಪ್ಪಿನಂಗಡಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ವಿನೂತನ ರೀತಿಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಇವರ ಪ್ರಾಯೋಜಕತ್ವದಲ್ಲಿ ನೇತ್ರಾವತಿ ನದಿಕಿನಾರೆಯಲ್ಲಿ ಐದು ದಿನಗಳ ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಒಳಗೊಂಡ ಸಂಗಮ ಉತ್ಸವ ನಡೆಯುತ್ತಿದೆ.
ಈ ಉತ್ಸವದಲ್ಲಿ ಪ್ರಥಮ ಬಾರಿಗೆ ಜೇಸಿಐ ಉಪ್ಪಿನಂಗಡಿ ನೇತೃತ್ವದಲ್ಲಿ ಜೇಸಿ ಸದಸ್ಯರಿಗೆ ವ್ಯಾಪಾರ ಮತ್ತು ವ್ಯವಹಾರದ ತಿಳುವಳಿಕೆ ಮತ್ತು ಭವಿಷ್ಯದಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಜೇಸಿ ಸಂಗಮ ಅಕ್ಕಿ ರೊಟ್ಟಿ ಸೆಂಟರ್ ತೆರೆಯಲಾಗಿದೆ. ಈ ಕೇಂದ್ರವನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ವಲಯ XVರ ವಲಯಾಧ್ಯಕ್ಷ ಜೇಸಿ ಪುರುಷೋತ್ತಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜೇಸಿ ಘಟಕದ ವಿಶೇಷ ಚಟುವಟಿಕೆಗೆ ಶುಭಾಶಯಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ವಲಯದ ಮೊದಲ ಮಹಿಳೆ ಜೇಸಿ ಶಿಲ್ಪಾ ಶೆಟ್ಟಿ ಮತ್ತು ಸೂರ್ಯ ನಾರಾಯಣ ಭಟ್ ಕಶೆಕೋಡಿ, ಕೈಲಾರ್ ರಾಜಗೋಪಾಲ್, ಜೇಸಿಐ ಉಪ್ಪಿನಂಗಡಿ ಘಟಕದ ಪೂರ್ವಾಧ್ಯಕ್ಷರಾದ ಜೇಸಿ ಗೋವಿಂದಪ್ರಸಾದ್ ಕಜೆ , ಜೇಸಿ ರವೀಂದ್ರ ದರ್ಭೆ, ಜೇಸಿ ವಿಜಯಕುಮಾರ್ ಕಲ್ಲಳಿಕೆ, ಜೇಸಿ ಪ್ರಶಾಂತ್ ಕುಮಾರ್ ರೈ, ಜೇಸಿ ಹರೀಶ್ ನಟ್ಟಿಬೈಲು, ಜೇಸಿ ಉಮೇಶ್ ಆಚಾರ್ಯ, ಜೇಸಿ ಕೆ.ವಿ.ಕುಲಾಲ್, ಕಾರ್ಯದರ್ಶಿ ಜೇಸಿ ಸುರೇಶ್ , ಕೋಶಾಧಿಕಾರಿ ಜೇಸಿ ಮಹೇಶ್, ಜೇಸಿ ವೀಣಾ ಪ್ರಸಾದ್ ಕಜೆ, ಜೇಸಿ ಸುಮಾನ್ ಬಜತ್ತೂರು, ಜೇಸಿ ಪ್ರಮೀಳಾ ಮಹೇಶ್ ಸೇರಿದಂತೆ ಅನೇಕ ಜೇಸಿ ಸದಸ್ಯರು ಉಪಸ್ಥಿತರಿದ್ದರು.
ಘಟಕ ಅಧ್ಯಕ್ಷ ಜೇಸಿ ಶೇಖರ್ ಗೌಂಡತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಜೇಸಿ ಮೋಹನ್ ಚಂದ್ರ ತೋಟದ ಮನೆ ಕಾರ್ಯಕ್ರಮ ನಿರೂಪಿಸಿದರು. ಈ ಕೇಂದ್ರದಲ್ಲಿ ಪ್ಲಾಸ್ಟಿಕ್ ರಹಿತವಾಗಿ ನೈಸರ್ಗಿಕ ಅಡಿಕೆ ಹಾಳೆ ತಟ್ಟೆ ಉಪಯೋಗಿಸಿ ಅಕ್ಕಿ ರೊಟ್ಟಿ ಮತ್ತು ಗಸಿ, ಕಲ್ಲಂಗಡಿ ಹಣ್ಣಿನ ಜ್ಯೂಸ್ ಮತ್ತು ನೈಸರ್ಗಿಕ ಐಸ್ ಕ್ರೀಮ್ ಮಿತ ದರದಲ್ಲಿ ನೀಡಲಾಗುತ್ತದೆ.