ಮಂಗಳೂರು: ರಾಜ್ಯದ 150 ಎಂಜಿನಿಯರಿಂಗ್ ಕಾಲೇಜು ಮತ್ತು 50ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶಕ್ಕಾಗಿ ಸಂಯೋಜಿತ ಪರೀಕ್ಷೆಯಾಗಿ ಮೇ 28ರಂದು ಕಾಮೆಡ್-ಕೆ ಪ್ರವೇಶ ಪರೀಕ್ಷೆಗಳು ನಡೆಯಲಿವೆ.
ಪ್ರವೇಶ ಪರೀಕ್ಷೆಯನ್ನು ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘದೊಂದಿಗೆ ಸಂಯೋಜಿತವಾಗಿರುವ ಕಾಲೇಜುಗಳು ಮತ್ತು ಬಿಇ/ ಬಿಟೆಕ್ ತರಗತಿ ಒದಗಿಸುವ ಯುನಿ-ಗೇಜ್ ಸದಸ್ಯ ವಿ.ವಿ.ಗಳಿಗೆ ನಡೆಸಲಾಗುತ್ತದೆ.
ದೇಶಾದ್ಯಂತ 150ಕ್ಕೂ ಹೆಚ್ಚು ನಗರಗಳಲ್ಲಿ 400 ಪರೀಕ್ಷಾ ಕೇಂದ್ರಗಳೊಂದಿಗೆ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ.
ನೋಂದಣಿ ಪ್ರಕ್ರಿಯೆಯು ಎ.24ರ ವರೆಗೆ ಆನ್‌ಲೈನ್‌ನಲ್ಲಿ ಲಭ್ಯವಿರಲಿದೆ.
ಈ ಬಾರಿ 22 ಸಾವಿರ ಸೀಟುಗಳಿದ್ದು, 10 ಸಾವಿರ ಭರ್ತಿಯಾಗುವ ನಿರೀಕ್ಷೆ