ಪುತ್ತೂರಿನ ಒಳಿತು ಮಾಡು ಮನುಷ್ಯ ತಂಡದ 21ನೇ ಕಾರ್ಯಕ್ರಮ.

ಶೇರ್ ಮಾಡಿ

ಪುತ್ತೂರು: ಇಲ್ಲಿನ ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಜೆಸಿಐ ಪುತ್ತೂರು,ಲಯನ್ಸ್ ಕ್ಲಬ್,ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ ಇದರಸಹಯೋಗದೊಂದಿಗೆ ನೇತ್ರದಾನ ನೋಂದಣಿ, ಉಚಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ನಿರಂತರವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುವ 21ನೇ ಯೋಜನೆ’ಒಳಿತು ಮಾಡು ಮನುಷ’ ಕಾರ್ಯಕ್ರಮವು ಮಾರ್ಚ್ 5 ರಂದು ಪುತ್ತೂರಿನ ” ಸೈನಿಕ ಭವನ ರಸ್ತೆಯಲ್ಲಿರುವ ಲಯನ್ಸ್ ಸೇವಾ ಮಂದಿರ ಪುತ್ತೂರುನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಕೇಶವ ನಾಯ್ಕ್ ಸಾಲ್ಮರ ಮಾತಾನಾಡಿ ಈ ಸಂಸ್ಥೆಯು ಉತಮವಾಗಿ ಬೆಳೆಯಲಿ,ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತಿದೆ ಇನ್ನು ಒಳ್ಳೆಯ ಕೆಲಸ ಮಾಡಲಿ ಎಂದು ಹಾರೈಸುತ್ತಾ ಯಶಸ್ವಿನಿ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು.ಇನ್ನೋರ್ವ ಅತಿಥಿ ಒಳಿತು ಮಾಡು ಮನುಷ(ರಿ) ಬೆಂಗಳೂರು ಇದರ ಸದಸ್ಯರಾದ ಹಾಲಿ ಪರ್ಲಡ್ಕರವರು ಮಾತನಾಡಿ ಒಳಿತು ಮಾಡು ಮಾನುಷ ತಂಡ ಪುತ್ತೂರಿನಲ್ಲಿ ಕೂಡ ಇದೆ ಎಂದು ತಿಳಿದು ತುಂಬಾ ಸಂತೋಷವಾಯಿತು.ಇನ್ನೂ ಕೂಡ ಈ ಸಂಸ್ಥೆಯು ಮುಂದುವರಿಯಬೇಕು.ಬಡ ಜನರಿಗೆ ಪ್ರಯೋಜನ ಆಗಬೇಕು.ಯಾವಾಗಲೂ ನಾನು ಈ ಸಂಸ್ಥೆಗೆ ಒಳ್ಳೆಯದನ್ನೇ ಆಶಿಸುತ್ತೇನೆ ಎಂದು ತಂಡಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಿಡ್ನಿ ವೈಫಲ್ಯ,ಕ್ಯಾನ್ಸರ್ ಹಾಗೂ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ 62,000 ಸಾವಿರ ಮೊತ್ತದ 62 ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು ಮತ್ತುಕಿಡ್ನಿ ಸಮಸ್ಯೆಯಿಂದ ಬಳಲುತಿರುವ ಬಡಗನ್ನೂರಿನ ಕು. ಅನನ್ಯ ಇವರಿಗೆ ಒಂದು ತಿಂಗಳಿಗೆ ಬೇಕಾಗಿರುವ 2750/- ರೂಪಾಯಿಯ ಔಷಧಿಯನ್ನು ನೀಡಲಾಯಿತು ಹಾಗೂ 47 ಜನರಿಗೆ ಬಿಪಿ,ಶುಗರ್ ತಪಾಸಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಶ್ರೀಮತಿ ಶೋಭಾ ಮಡಿವಾಳ,ಸ್ಥಾಪಕ ಅಧ್ಯಕ್ಷರಾದ ಜೇಸಿ ಚೇತನ್ ಕುಮಾರ್ ಸದಸ್ಯರಾದ ವಿಜಯ್ ಕುಮಾರ್,ಸೌಜನ್ಯ ಅರ್ಲಪದವು,ಶ್ರೀಮತಿ ಮಾಲಿನಿ,ಶ್ರೀಮತಿ ಕಾವ್ಯ,ಶ್ರೀಮತಿ ಸರಸ್ವತಿ,ಶ್ರೀಮತಿ ಪುಷ್ಪ,ಕುಮಾರಿ ಸ್ವಾತಿ ಎ, ಕುಮಾರಿ ದಿವ್ಯ,ಅಕ್ಷಯ ಕುಲಾಲ್ ಹಾಜರಿದ್ದರು. ಪ್ರಾರ್ಥನೆಯನ್ನು ಸ್ವಾತಿ, ಸ್ವಾಗತ ಮಮತಾ,ಧನ್ಯವಾದಕುಮಾರಿ ಹರ್ಷಿತಾ ಹಾಗೂ ಶ್ರೀಮತಿ ಶೃತಿಕ ಜಲ್ಸುರ್ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

error: Content is protected !!