ಅರಣ್ಯವಾಸಿಗಳಿಗೆ ವಿದ್ಯುತ್ ಸಂಪರ್ಕ

ಶೇರ್ ಮಾಡಿ

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಶಿರ್ಲಾಲು ಗ್ರಾಮದ ಹೆಂಡೇಲು ಹಾಗೂ ಬೈಲು ಪರಿಸರದ ಮಂದಿ ಕಳೆದ ಐವತ್ತು ವರ್ಷಗಳಿಂದ ವಿದ್ಯುತ್ ವಂಚಿತಗೊಂಡ ಸುಮಾರು 13 ಮನೆಗಳಿಗೆ ಮೆಸ್ಕಾಂ ಇಲಾಖೆಯ ಮುಖೇನ ವಿದ್ಯುತ್ ಸಂಪರ್ಕ ಕಲ್ಪಿಸಿ ಶುಕ್ರವಾರ ಶಾಸಕ ಹರೀಶ್ ಪೂಂಜ ಉದ್ಘಾಟನೆ ನೆರವೇರಿಸಿದರು.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕುಗ್ರಾಮದೊಳಗೆ 13 ಲಕ್ಷ ರೂ. ವೆಚ್ಚದಲ್ಲಿ ಹಂಡೇಲು ಮತ್ತು ಬೈಲು ಪರಿಸರದ 13 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದರು.
ಇಲ್ಲಿನ ಬೈಲು ನಿವಾಸಿ ಫಲಾನುಭವಿ ನಾರಾಯಣ ಗೌಡ ಅವರ ಮನೆಯಲ್ಲಿ ಶಾಸಕರು ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿದರು.
ಶಿರ್ಲಾಲು‌ ಗ್ರಾ.ಪಂ.ಅಧ್ಯಕ್ಷ ತಾರಾನಾಥ ಗೌಡ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಡಲ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ ಮತ್ತು ಆನಂದ ಸಾಲಿಯಾನ್, ಶಕ್ತಿ ಕೇಂದ್ರ ಅಧ್ಯಕ್ಷ ಮಾಧವ, ಬೂತ್ ಸಮಿತಿ ಅಧ್ಯಕ್ಷರುಗಳಾದ ದೇಜಪ್ಪ ಟೈಲರ್ ಹಾಗೂ ಶೀನಪ್ಪ ಎಂ., ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಕರಂಬಾರು, ಸದಸ್ಯರಾದ ಸೋಮನಾಥ ಬಳ್ಳಿದಡ್ಡ, ಗೀತಾ, ಕೊರಗಪ್ಪ, ಜ್ಯೋತಿ, ಉಷಾ, ಪ್ರಕಾಶ್ ಹೆಗ್ಡೆ, ಸುಶೀಲಾ ಸಹಿತ ಪ್ರಮುಖರು ಉಪಸ್ಥಿತರಿದ್ದರು.
ನಾರಾಯಣ ಗೌಡ ಬೈಲು, ಕೃಷ್ಣಪ್ಪ ಮಲೆಕುಡಿಯ, ಮೋನಪ್ಪ ಮಲೆಕುಡಿಯ, ಸಂಜೀವ ಮಲೆಕುಡಿಯ, ಮನೋಜ್ ಮಲೆಕುಡಿಯ, ಗಣೇಶ ಮಲೆಕುಡಿಯ, ರೇವತಿ ಪೂಜಾರಿ, ಹರೀಶ್ ಬೈಲು, ಪದ್ಮಯ್ಯ ಗೌಡ ಬೈಲು, ದೇವಪ್ಪ ಮಲೆಕುಡಿಯ, ಭುಜಂಗ ಗೌಡ ಬೈಲು, ರಾಜು ಮಲೆಕುಡಿಯ, ಹರೀಶ್ ಮಲೆಕುಡಿಯ ಹೆಂಡೇಲು ಅವರು ವಿದ್ಯುತ್ ಸಂಪರ್ಕ ಪಡೆದರು.
ಶಕ್ತಿ ಕೇಂದ್ರ ಅಧ್ಯಕ್ಷ ಮಾಧವ ಸ್ವಾಗತಿಸಿದರು. ಸಹಕಾರ ಭಾರತಿ ಪ್ರ.ಕಾರ್ಯದರ್ಶಿ ಸತೀಶ್ ಶಿರ್ಲಾಲು ಕಾರ್ಯಕ್ರಮ ನಿರ್ವಹಿಸಿದರು. ಬೂತ್ ಸಮಿತಿ ಅಧ್ಯಕ್ಷ ದೇಜಪ್ಪ ವಂದಿಸಿದರು.

Leave a Reply

error: Content is protected !!