5,8ನೇ ತರಗತಿ ಪಬ್ಲಿಕ್ ಪರೀಕ್ಷೆ ಪ್ರಶ್ನೆಪತ್ರಿಕೆ ಸ್ವರೂಪ, ಪಠ್ಯಕ್ರಮ ಮಾಹಿತಿ ಇಲ್ಲಿದೆ

ಶೇರ್ ಮಾಡಿ

2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ 27-03-2023 ರಿಂದ 01-04-2023 ರವರೆಗೆ ಮೌಲ್ಯಾಂಕನ (ಬೋರ್ಡ್) ಪರೀಕ್ಷೆಯನ್ನು ನಡೆಸಲು ನಿರ್ಧರಿಸಿ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಬಿಡುಗಡೆ ಮಾಡಿದೆ.

ಘನ ಉಚ್ಛ ನ್ಯಾಯಾಲಯವು ದಿನಾಂಕ 27,03,2023 ರಿಂದ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನವನ್ನು ನಡೆಸಲು ಅವಕಾಶ ಕಲ್ಪಿಸಿದ್ದು, ಅದರಂತೆ 5 ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ 27.03.2013 ರಿಂದ 30.03.2023 ರವರೆಗೆ ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ 27.03.2023 ರಿಂದ 01.04.2023 ರವರೆಗೆ ಮೌಲ್ಯಾಂಕನವನ್ನು ನಡೆಸಲಾಗುತ್ತಿದೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಶ್ನೆಪತ್ರಿಕೆ ಸ್ವರೂಪ, ಪಠ್ಯಕ್ರಮ ಮಾಹಿತಿ, ಯಾವ ಯಾವ ಘಟಕದಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ? ಎನ್ನುವ ಮಾಹಿತಿ ಇಲ್ಲಿದೆ.

ಪ್ರಶ್ನೆಪತ್ರಿಕೆ ಸ್ವರೂಪ

  • 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ದಿನವೊಂದಕ್ಕೆ ಒಂದು ವಿಷಯದಂತೆ ಮೌಲ್ಯಾಂಕನ ನಡೆಸಲಾಗುತ್ತದೆ.
  • ಪ್ರತಿ ವಿಷಯದ ಮೌಲ್ಯಂಕನಕ್ಕೆ ಎರಡು ಗಂಟೆಗಳ ಅವಧಿಯನ್ನು ನಿಗದಿಪಡಿಸಲಾಗಿದೆ.
    ತರಗತಿವಾರು ಪ್ರತಿ ವಿಷಯಕ್ಕೆ 40 ಅಂಕಗಳ ಲಿಖಿತ ಮೌಲ್ಯಾಂಕನಕ್ಕೆ 28 ಪ್ರಶ್ನೆಗಳನ್ನೊಳಗೊಂಡ 1 ಅಂಕದ
  • 20 ಬಹುಆಯ್ಕೆ ಪ್ರಶ್ನೆಗಳು, 2 ಅಂಕಗಳ 5, 3 ಅಂಕಗಳ 2 ಹಾಗೂ 4 ಅಂಕಗಳ 1 ವಿವರಣಾತ್ಮಕ ಪ್ರಶ್ನೆಗಳು ಪ್ರತ್ಯಕ ಪ್ರಶ್ನೋತ್ತರ ಪತ್ರಿಕೆಯನ್ನು ನೀಡಲಾಗುತ್ತದೆ.
  • 10 ಅಂಕಗಳ ಮೌಖಿಕ ಮೌಲ್ಯಾಂಕನವನ್ನು ಶಾಲಾ ಹಂತದಲ್ಲಿಯೇ ನಿರ್ವಹಿಸಲು ತಿಳಿಸಲಾಗಿದೆ.
  • 40 ಅಂಕಗಳ ಲಿಖಿತ ಮೌಲ್ಯಾಂಕನ ಮತ್ತು 10 ಅಂಕಗಳ ಮೌಖಿಕ ಮೌಲ್ಯಾಂಕನದಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು 20 ಅಂಕಗಳಿಗೆ ಪರಿವರ್ತಿಸುವುದು.
  • ವಿದ್ಯಾರ್ಥಿಗಳನ್ನು ಮೌಲ್ಯಾಂಕನಕ್ಕೆ ಸಿದ್ಧಗೊಳಿಸಲು ಮಾದರಿ ಪ್ರಶ್ನೋತ್ತರ ಪತ್ರಿಕೆಗಳನ್ನು ಮತ್ತು ಮೌಲ್ಯಾಂಕನಕ್ಕೆ ಒಳಪಡಿಸಿರುವ ಪಠ್ಯಪುಸ್ತಕದಲ್ಲಿನ ಘಟಕಗಳ ವಿವರಗಳನ್ನು ಮಂಡಲಿಯ ವೆಬ್‌ಸೈಟ್‌ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ.

5ನೇ ತರಗತಿ ಪಠ್ಯಪುಸ್ತಕ

ಘಟಕಗಳು

  • ಗಣಿತ ವಿಷಯ
  • ಗುಣಕಾರ.
  • ಭಾಗಾಕಾರ.
  • ಮಾಸಿಕ ಗಣಿತ.
  • ದಶಮಾಂಶ ಭಿನ್ನರಾಶಿಗಳು.
  • ಹಣ.
  • ತೂಕ ಮತ್ತು ಗಾತ್ರ.
  • ಕಾಲ.
  • ಸಮಮಿತಿ ಆಕೃತಿಗಳು.
  • ಮೂರು ಆಯಾಮದ ಆಕೃತಿಗಳು.
  • ವಿನ್ಯಾಸಗಳು.
  • ಭಿನ್ನರಾಶಿಗಳು.
  • ಕೋನಗಳು.
  • ಉದ್ದ.
  • ಅಂಕಿ ಅಂಶಗಳು.

 

  • ಪರಿಸರ ಅಧ್ಯಯನ
  • ನೈಸರ್ಗಿಕ ಸಂಪನ್ಮೂಲಗಳು.
  • ಕೃಷಿ.
  • ಆಹಾರ-ಜೀವದ ಜೀವಾಳ.
  • ಜನವಸತಿಗಳು.
  • ವಸ್ತು ಸ್ವರೂಪ.
  • ಧಾತು, ಸಂಯುಕ್ತ ಮತ್ತು ಮಿಶ್ರಣಗಳು.
  • ವಿಸ್ಮಯ ಶಕ್ತಿ.
  • ಬಾನಂಗಳ.
  • ನಮ್ಮ ಭಾರತ-ಪ್ರಾಕೃತಿಕ ವೈವಿಧ್ಯ.
  • ನಮ್ಮ ಭಾರತ-ರಾಜಕೀಯ ಮತ್ತು ಸಾಂಸ್ಕೃತಿಕ.

8ನೇ ತರಗತಿ ಪಠ್ಯಪುಸ್ತಕ ಘಟಕಗಳು

  • ಸಮಾಜ ವಿಜ್ಞಾನ
  • ಇತಿಹಾಸ
  • ಮೌರ್ಯರು ಮತ್ತು ಕುಶಾನರು.
  • ಗುಪ್ತರು ಮತ್ತು ವರ್ಧನರು.
  • ದಕ್ಷಿಣ ಭಾರತದ ರಾಜವಂಶಗಳು-ಶಾತವಾಹನರು.
  • ಕದಂಬರು.
  • ಗಂಗರು.
  • ಬಾದಾಮಿಯ ಚಾಲುಕ್ಯರು.
  • ಮಾನ್ಯಖೇಟದ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಲುಕ್ಯರು.
  • ಚೋಳರು ಮತ್ತು ದ್ವಾರಸಮುದ್ರದ ಹೊಯ್ಸಳರು.

 

  • ರಾಜ್ಯ ಶಾಸ್ತ್ರ- ಸ್ಥಳೀಯ ಸ್ವಯಂ ಸರ್ಕಾರಗಳು.
    ಭೂಗೋಳ ಶಾಸ್ತ್ರ – ಜಲಗೋಳ, ಜೀವಗೋಳ.

 

  • ವಿಜ್ಞಾನ
  • ದಹನ ಮತ್ತು ಜ್ವಾಲ.
  • ಜೀವಕೋಶ-ರಚನೆ ಮತ್ತು ಕಾರ್ಯಗಳು.
  • ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ.
  • ಹದಿಹರಯಕ್ಕೆ ಪ್ರವೇಶ.
  • ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು.
  • ಕೆಲವು ನೈಸರ್ಗಿಕ ವಿದ್ಯಮಾನಗಳು.
  • ಬೆಳಕು.
  • ನಕ್ಷತ್ರಗಳು ಮತ್ತು ಸೌರಮಂಡಲ.
  • ವಾಯುಮಾಲಿನ್ಯ ಮತ್ತು ಜಲಮಾಲಿನ್ಯ

 

  • ಗಣಿತ
  • ಘನಗಳು ಮತ್ತು ಘನಮೂಲಗಳು.
  • ಘಾತಾಂಕಗಳು ಮತ್ತು ಘಾತಸೂಚಿಗಳು.
  • ದತ್ತಾಂಶಗಳ ನಿರ್ವಹಣೆ.
  • ನೇರ ಮತ್ತು ವಿಲೋಮ ಅನುಪಾತಗಳು.
  • ನಕ್ಷೆಗಳ ಪರಿಚಯ.
  • ಅಪವರ್ತಿಸುವಿಕೆ.
  • ಘನಾಕೃತಿಗಳ ದೃಗ್ಗೋಚರನ.
  • ಪರಿಮಾಣಗಳ ಹೋಲಿಕೆ.
  • ಕ್ಷೇತ್ರಗಣಿತ.

Leave a Reply

error: Content is protected !!