ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಕೇಂದ್ರ ಒಕ್ಕೂಟ ಸಮಿತಿ ಸಭೆಯನ್ನು ಕಡಬ ಅಂಬೇಡ್ಕರ್ ಸಮುದಾಯ ಭವನದಲ್ಲಿ ಉದ್ಘಾಟಿಸಿ ಮಾತನಾಡಿದ ದಕ್ಷಿಣಕನ್ನಡ, ಪುತ್ತೂರು ಜಿಲ್ಲಾ ವ್ಶಾಪ್ತಿಯ ನಿರ್ಧೇಶಕರಾದ ಪ್ರವೀಣ್ ಕುಮಾರ್ ಒಕ್ಕೂಟದ ಅಧ್ಶಕ್ಷರುಗಳು ಚುನಾವಣೆ ಮೂಲಕ ಆಯ್ಕೆಯಾಗದೇ ಆಯ್ಕೆಯ ಮೂಲಕ ಆಯ್ಕೆಯಾದವರು.
ಒಕ್ಕೂಟದ ಸ್ವಸಹಾಯ ಸಂಘಗಳಿಗೆ ಯೋಜನೆಯು ನೀಡಿರುವ ವಿಮಾ ಸೌಲಭ್ಶಗಳಾದ ಪ್ರಗತಿರಕ್ಷಾ ಕವಚ, ಸಂಪೂರ್ಣ ಸುರಕ್ಷಾ, ಆರೋಗ್ಶರಕ್ಷಾˌಮೈಕ್ರೋಬಚಾತ್ ಭೀಮಾಜ್ಶೋತಿ ಗಳಂತಹ ವಿಮಾಸೌಲಭ್ಶಗಳಲ್ಲಿ ಎಲ್ಲಾ ಸದಸ್ಶರುಗಳೂ ತೋಡಗಿಕೊಳ್ಳುವಂತೆ ಪ್ರೇರಣೆ ನೀಡಬೇಕು. ಈ ಮೂಲಕ ಅಧ್ಶಕ್ಷ ಒಕ್ಕೂಟದ ರಕ್ಷಾ ಕವಚವಾಗಿ ಸೇವೆ ಸಲ್ಲಿಸಬೇಕು. ಯೋಜನೆಯ ಇನ್ನೂ ಹಲವಾರು ಸೌಲಭ್ಶಗಳನ್ನು ಒಕ್ಕೂಟದ ಸ್ವಸಹಾಯ ಸಂಘಗಳಿಗೆ ಹಾಗೂ ಯೋಜನೇತರ ಪಾಲುದಾರರಿಗೆ ಮತ್ತು ಸಮುದಾಯಕ್ಕೆ ತಲುಪಿಸುವಂತಾದರೆ ಜನರ ಮನಸ್ಸಿನಲ್ಲಿ ಶಾಸ್ವತ ಸ್ಥಾನ ಪಡೆಯಲು ಸಾಧ್ಶ ಎಂದರು.
ಸಭೆಯ ಅಧ್ಶಕ್ಷತೆಯನ್ನು ಕೇಂದ್ರ ಒಕ್ಕೂಟ ಸಮಿತಿಯ ನೂತನ ಅಧ್ಶಕ್ಷರಾದ ಸಂತೋಷ್ ಕೇನ್ಶ ವಹಿಸಿದ್ದರು. ವೇದಿಕೆಯಲ್ಲಿ ಕಡಬ ವಲಯದ ಅಧ್ಶಕ್ಷರಾದ ರಮೇಶ್ ರೈ, ನೆಲ್ಶಾಡಿ ವಲಯದ ಅಧ್ಶಕ್ಷರಾದ ಕುಶಾಲಪ್ಪ ಗೌಡ, ಆಲಂಕಾರು ವಲಯದ ಅಧ್ಶಕ್ಷರಾದ ಉಮೇಶ್, ಸವಣೂರು ವಲಯದ ಅಧ್ಶಕ್ಷರಾದ ರಾಧಕೃಷ್ಣ ಹಾಗೂ ಗೊಳಿತೋಟ್ಟು ವಲಯ ಅಧ್ಶಕ್ಷರಾದ ಬಾಲಕೃಷ್ಣ ಗೌಡ, ಉಡುಪಿ ಪ್ರಾದೇಶಿಕ ವ್ಶಾಪ್ತಿಯ ಜನಜಾಗೃತಿ ಯೋಜನಾಧಿಕಾರಿ ತಿಮ್ಮಯ್ಶ ನಾಯ್ಕ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ಯನ್ ಸ್ವಾಗತಿಸಿ, ತಾಲೂಕಿನ ಸಾಧನಾ ವರದಿ ವಾಚಿಸಿದರು. ನೆಲ್ಶಾಡಿ ವಲಯ ಮೇಲ್ವೀಚಾರಕ ವಿಜೇಶ್ ಜೈನ್ ಧನ್ಶವಾದ ಮಾಡಿದರು. ಕಾರ್ಯಕ್ರಮದಲ್ಲಿ ಕಡಬ ತಾಲೂಕಿನ 62 ಒಕ್ಕೂಟಗಳ ಅಧ್ಶಕ್ಷರುಗಳು ಯೋಜನೆಯ ಮೇಲ್ವೀಚಾರಕರುಗಳು ಉಪಸ್ಥಿತರಿದ್ದರು. ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರ್ವಹಿಸಿದರು.