ಮದುವೆಗೆ ಚಿನ್ನಾಭರಣ ಖರೀದಿಸಲು ತೆರಳುತ್ತಿದ್ದ ವೇಳೆ ಹತ್ತು ಲಕ್ಷ ರೂ ದೋಚಿದ ಅಪರಿಚಿತ ವ್ಯಕ್ತಿ

ಶೇರ್ ಮಾಡಿ

ಬೆಳ್ತಂಗಡಿ: ಇಳಂತಿಲ ಗ್ರಾಮದ ಪೆದಮಲೆ-ಸರಳಿಕಟ್ಟೆ ಯ ರಿಫಾಯಿನಗರ ಎಂಬಲ್ಲಿ ಅಪರಿಚಿತ ವ್ಯಕ್ತಿ ಹತ್ತು ಲಕ್ಷ ರೂ ಹಣ ದೋಚಿದ ಘಟನೆ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಇಳಂತಿಲ ಗ್ರಾಮದ ಕಾಯರ್ಪಾಡಿ ನಿವಾಸಿ ಮಹಮ್ಮದ್ ಕೆ. ಎಂಬವರು ಮಗಳ ಮದುವೆಗಾಗಿ ಚಿನ್ನಾಭರಣ ಖರೀದಿಸಲು ಸಂಗ್ರಹಿಸಿಟ್ಟಿದ್ದ ರೂ 10,000,00 ನಗದು ಹಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಅದನ್ನು ಒಂದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಸ್ಕೂಟರ್ ನ ಸೀಟಿನ ಅಡಿಯಲ್ಲಿ ಇರಿಸಿ ಪತ್ನಿ ಮೈಮುನರವರೊಂದಿಗೆ ಉಪ್ಪಿನಂಗಡಿ ಜ್ಯುವೆಲ್ಲರಿಗೆ ಹೋಗುತ್ತಿರುವಾಗ ದಾರಿಯ ಮಧ್ಯೆ ಸರಳಿಕಟ್ಟೆಯ ಕಂಪ್ಲೋಡಿ ಎಂಬಲ್ಲಿರುವ ಮಹಮ್ಮದ್ ರವರ ಅತ್ತೆ ಬಿಫಾತುಮ್ಮ ಎಂಬವರು ಮರಣ ಹೊಂದಿರುವ ಮಾಹಿತಿ ತಿಳಿದು ಸರಳಿಕಟ್ಟೆಗೆ ಸ್ಕೂಟರನ್ನು ತಿರುಗಿಸಿ ಪೆದಮಲೆಯಿಂದ ಸರಳಿಕಟ್ಟೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಇಳಂತಿಲ ಗ್ರಾಮದ ರಿಫಾಯಿನಗರ ಎಂಬಲ್ಲಿಗೆ ತಲುಪಿದಾಗ ಸ್ಕೂಟರ್ ನಿಂದ ಆಯತಪ್ಪಿ ಮಹಮ್ಮದ್ ಮತ್ತು ಪತ್ನಿ ಮೈಮುನರವರು ರಸ್ತೆಗೆ ಬಿದ್ದು ಸಣ್ಣ ಪುಟ್ಟ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಅಟೋ ರಿಕ್ಷಾದಲ್ಲಿ ಸ್ಕೂಟರಿನಲ್ಲಿದ್ದ ಹಣದ ಕಟ್ಟನ್ನು ಹಿಡಿದುಕೊಂಡು ಉಪ್ಪಿನಂಗಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವಾಪಸು ಅಟೋರಿಕ್ಷಾದಲ್ಲಿ ಮಹಮ್ಮದ್ ಅವರು ಹೆಂಡತಿಯನ್ನು ಮನೆಗೆ ಬಿಟ್ಟು ಹಣದ ಕಟ್ಟಿನೊಂದಿಗೆ ವಾಪಸು ಅದೇ ರಿಕ್ಷಾದಲ್ಲಿ ಸ್ಕೂಟರ್ ಬಿದ್ದ ಸ್ಥಳಕ್ಕೆ ಬಂದು ಕೈಯಲ್ಲಿದ್ದ ಹಣದ ಕಟ್ಟನ್ನು ಸ್ಕೂಟರ್ ನ ಸೀಟಿನಡಿಯಲ್ಲಿರುವ ಬಾಕ್ಸ್ ನಲ್ಲಿ ಇಡುತ್ತಿದ್ದಂತೆಯೇ ಓರ್ವ ಅಪರಿಚಿತ ವ್ಯಕ್ತಿ ಹಣದ ಕಟ್ಟನ್ನು ಬಲವಂತವಾಗಿ ಎಳೆದುಕೊಂಡು ಓಡಿ ಹೋದ ಘಟನೆ ನಡೆದಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಸಹಾಯಕ

Leave a Reply

Your email address will not be published. Required fields are marked *

error: Content is protected !!