




ಬೆಳ್ತಂಗಡಿ: ಬೆಳ್ತಂಗಡಿ ನಗರದ ಮೇಲಂತಬೆಟ್ಟುನಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಇದರ ಲೋಕಾರ್ಪಣೆ ಮಾ. 25ರಂದು ನಡೆಯಿತು.

ಶಾಸಕ ಹರೀಶ್ ಪೂಂಜಾ ಉದ್ಯಾನವನವನ್ನು ಸಾವ೯ಜನಿಕರ ಉಪಯೋಗಕ್ಕೆ ಲೊಕರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ ಉಪಾಧ್ಯಕ್ಷ ಜಯಾನಂದ ಗೌಡ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್, ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕಳಾನ್, ಮಂಗಳೂರು ವಿಭಾಗ ಉಪಅರಣ್ಯಸಂರಕ್ಷಣಾಧಿಕಾರಿ ಡಾ.ವೈ.ಕೆ ದಿನೇಶ್ ಕುಮಾರ್, ಅರಣ್ಯ ಜಾಗೃತಿದಳದ ಎ ಸಿ ಎಫ್ ಸುಬ್ರಹ್ಮಣ್ಯ ರಾವ್, ಸುಬ್ರಹ್ಮಣ್ಯ ಉಪ ವಿಭಾಗದ ಎ ಸಿ ಎಫ್ ಪ್ರವೀಣ್ ಕುಮಾರ್ ಶೆಟ್ಟಿ, ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಎಚ್. ಎಸ್., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್, ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ, ಸದಸ್ಯರಾದ ಯೋಗಿತಾ, ಚಂದ್ರರಾಜ್, ಪಟ್ಟಣ ಪಂಚಾಯತ್ ಸದಸ್ಯರಾದ ಶರತ್ ಕುಮಾರ್, ಲೋಕೆಶ್, ಅಂಬರೀಶ್, ತುಳಸಿ ಕರುಣಾಕರ ನಾಮನಿರ್ದೇಶನ ಸದಸ್ಯರಾದ ಪ್ರಕಾಶ್, ಲಲಿತಾ ಲಾಯಿಲ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಉಪಸ್ಥಿತಿಯಿದ್ದರು.

28 ಎಕರೆ ಜಾಗದಲ್ಲಿ ಸಾಲು ಮರ ತಿಮ್ಮಕ್ಕ ವೃಕ್ಷೋಧ್ಯಾನ 2 ಕೋಟಿ 65 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪರಿಸರ ಪ್ರೀತಿಯನ್ನು ಮೂಡಿಸುವ ಈ ಪಾರ್ಕ್ ನೊಳಗೆ ಸಂಪೂರ್ಣ ವೃಕ್ಷಗಳಿರುವುದು ಮಾತ್ರವಲ್ಲ, ವಾಕಿಂಗ್ ಪಾಥ್ ಕೂಡ ನಿರ್ಮಾಣ ಮಾಡಲಾಗಿದೆ. ಇದರ ಜೊತೆ ಮಕ್ಕಳಿಗೆ ಆಟವಾಡಲು ಪ್ಲೇಯಿಂಗ್ ಏರಿಯಾವನ್ನು ನಿರ್ಮಿಸಲಾಗಿದೆ. ಅಲ್ಲಲ್ಲಿ ವಿಶ್ರಾಂತಿ ತಾಣಗಳಿವೆ. ಈಗಾಗ್ಲೇ ಬಹುತೇಕರು ಇಲ್ಲಿ ಬಂದು ವಿಶ್ರಾಂತಿ ಪಡೆಯುತ್ತಾ, ಸಂಜೆ ವೇಳೆಗೆ ವಾಕಿಂಗ್ ನಲ್ಲಿ ನಿರತರಾಗಿರುತ್ತಾರೆ. ಇದೀಗ ಲೋಕಾರ್ಪಣೆಗೊಂಡಿದೆ. ಇದೆ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ವತಿಯಿಂದ ಹಕ್ಕು ಪತ್ರ ವಿತರಿಸಲಾಯಿತು.
ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸ್ವಾಗತಿಸಿ, ಧರಣೇಂದ್ರ ಕೆ.ಜೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.