4.02 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೆಟ್ಟಣ-ಚೆಂಡೆಹಿತ್ಲು-ಪುತ್ತಿಲ-ಬೊಟ್ಟಡ್ಕ-ಕೆಂಜಾಳ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಎಸ್.ಅಂಗಾರ

ಶೇರ್ ಮಾಡಿ

ಕಡಬ: ನೆಟ್ಟಣ-ಚೆಂಡೆಹಿತ್ಲು-ಪುತ್ತಿಲ-ಬೊಟ್ಟಡ್ಕ-ಕೆಂಜಾಳ ಎಂಬಲ್ಲಿ ಲೋಕೋಪಯೋಗಿ ಇಲಾಖೆ, ನಬಾರ್ಡ್ ಆರ್.ಐ.ಡಿ.ಎಫ್. 28ರ ಯೋಜನೆಯಡಿ ರೂ.4.02 ಕೋಟಿ ಅನುದಾನದಲ್ಲಿ ಅಭಿವೃದ್ಧಿಗೊಳ್ಳಲಿರುವ ರಸ್ತೆಗೆ ಸಚಿವರಾದ ಎಸ್. ಅಂಗಾರರವರು ಇಂದು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ದ.ಕ‌.ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ವೆಂಕಟ್ ವಳಲಂಬೆ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಉಪಾಧ್ಯಕ್ಷರಾದ ವಾಡ್ಯಪ್ಪ ಗೌಡ ಎರ್ಮಾಯಿಲ್, ಬಿಳಿನೆಲೆ ಗ್ರಾ.ಪಂ.ಸದಸ್ಯರಾದ ಮುರಳೀಧರ ಎರ್ಮಾಯಿಲ್, ಮಾಜಿ ತಾ.ಪಂ.ಸದಸ್ಯೆ ಸರೋಜಿನಿ ಜಯಪ್ರಕಾಶ್, ಪ್ರಮುಖರಾದ ಸತೀಶ್ ಎರ್ಕ, ಯಶವಂತ ಕಳಿಗೆ, ತಿರುಮಲೇಶ್ವರ ಮೇರುಂಜಿ, ನಾರಾಯಣ ಗೌಡ, ರಘು ನೆಟ್ಟಣ, ಪ್ರಸಾದ್ ನೆಟ್ಟಣ, ಪ್ರಕಾಶ್ ನೆಟ್ಟಣ, ತುಕಾರಾಂ ಸೂಡ್ಲು, ಕುಮಾರ ಕಳಿಗೆ, ತಮ್ಮಯ್ಯ ಮಾಸ್ಟರ್, ಸುರೇಶ್ ಬಿಳಿನೆಲೆ ಉಪಸ್ಥಿತರಿದ್ದರು.

See also  ಕಡಬ: ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೃದ್ದೆಗೆ ವೀಲ್ ಚಯರ್ ವಿತರಣೆ

Leave a Reply

Your email address will not be published. Required fields are marked *

error: Content is protected !!