ನೆಲ್ಯಾಡಿ: ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಶ್ರೀ ಶಾಸ್ತಾರೇಶ್ವರ ದೇವಸ್ಥಾನ ಕುತ್ರಾಡಿ ಹಾರ್ಪಳ ಇದರ 7ನೇ ವರ್ಷದ ಪ್ರತಿಷ್ಠಾ ವಾರ್ಷೀಕೋತ್ಸವ ದಿನಾಂಕ 22.04.2023 ಹಾಗೂ 23.04.2023 ರಂದು ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾ.25ರಂದು ಶ್ರೀ ಶಾಸ್ತಾರ ದೇವರ ಕ್ಷೇತ್ರದಲ್ಲಿ ನಡೆಯಿತ್ತು.
ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಧರ ನೂಜಿನ್ನಾಯ,ಶ್ರೀ ಶಾಸ್ತಾರೇಶ್ವರ ಟ್ರಸ್ಟ್ ರಿ. ಹಾಗೂ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ಸೂರ್ಯನಾರಾಯಣ ಜೋಗಿತ್ತಾಯ, ಅಧ್ಯಕ್ಷರಾದ ಸುಂದರ ಗೌಡ ಅತ್ರಿಜಾಲು, ಉಪಾಧ್ಯಕ್ಷರಾದ ಶಿವರಾಮ ಗೌಡ ಮಕ್ಕಿಗದ್ದೆ, ಜೊತೆ ಕಾರ್ಯದರ್ಶಿ ದೀಪಕ್ ಬಿ ಎಸ್, ಕೋಶಾಧಿಕಾರಿ ಸೀತಾರಾಮ ಗೌಡ ಕಾನಮನೆ, ಸದಸ್ಯರಾದ ಧನಂಜಯ ಗೌಡ ಹೊಸವಕ್ಲು, ಬಾಲಕೃಷ್ಣ ಗೌಡ ಹಾರ್ಪಳ, ಪ್ರತಿಷ್ಠಾ ವಾರ್ಷಿಕೋತ್ಸವದ ಉತ್ಸವ ಸಮಿತಿಯ ಅಧ್ಯಕ್ಷರಾದ ಶೀನಪ್ಪ ಗೌಡ ಬರೆಮೇಲು, ಕಾರ್ಯದರ್ಶಿ ಸ್ವರೂಪ್ ಹಾರ್ಪಳ, ಕೋಶಾಧಿಕಾರಿ ಶಿವಪ್ರಸಾದ್ ಮೂಲೆಮನೆ, ಸದಸ್ಯರಾದ ಗುಡ್ಡಪ್ಪ ಗೌಡ ತಿಮರಡ್ಡ ಪೊನ್ನೆತ್ತಿಮಾರ್, ಮೇಘಶ್ಯಾಂ ವಾಲ್ತಾಜೆ, ಮಹಾಬಲ ಪಡುಬೆಟ್ಟು, ಭಜನಾ ಸಮಿತಿಯ ಅಧ್ಯಕ್ಷರಾದ ಯಾದವ ಶೆಟ್ಟಿ ರಾಮನಗರ, ಶ್ರೀ ರಾಜನ್ ದೈವ ಟ್ರಸ್ಟ್ ರಿ.ದೈವಗಿರಿ ಬೊನ್ಯಸಾಗು ಇದರ ಅಧ್ಯಕ್ಷರಾದ ಸತೀಶ್ಚಂದ್ರ ಗೌಡ ಅತ್ರಿಜಾಲು, ಶ್ರೀ ರಾಜನ್ ದೈವ ದೈವಗಿರಿ-ಬೊನ್ಯಸಾಗು ಇದರ ಪ್ರಧಾನ ದೈವ ಪರಿಚಾರಕರಾದ ಪಮ್ಮಣ್ಣ ಗೌಡ ಬೊನ್ಯಸಾಗು ಅಲ್ಲದೆ ಊರಿನ ಎಲ್ಲಾ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.
ಈ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ “ವೈದಿಕ ಕಾರ್ಯಕ್ರಮ”ಗಳು,ಸ್ಥ ಳೀಯ ಹಾಗೂ ಆಹ್ವಾನಿತ ಕುಣಿತ ಭಜನಾ ತಂಡಗಳಿಂದ ಕುಣಿತ ಭಜನೆ “ಭಕ್ತಿ ಹೆಜ್ಜೆ”, ನಾಟಕಾಭಿಮಾನಿಗಳ ಪ್ರಾಯೋಜಕತ್ವದಲ್ಲಿ ಶಾರದಾ ಆರ್ಟ್ಸ್ ಕಲಾವಿದೆರ್ ರಿ.ಮಂಜೇಶ್ವರ ಅಭಿನಯಿಸುವ ತುಳು ನಾಟಕ “ಯಾನ್ ಉಲ್ಲೆತ್ತ”, ಬೇರೆ ಬೇರೆ ಭಜನಾ ತಂಡಗಳಿಂದ” ಭಜನಾ ಕಾರ್ಯಕ್ರಮ” ಹಾಗೂ ಸ್ಥಳೀಯರಿಂದ ವೈವಿಧ್ಯಮಯ “ಸಾಂಸ್ಕೃತಿಕ ವೈಭವ” ಕಾರ್ಯಕ್ರಮಗಳು ನೆರವೇರಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಊರಿನ ಹಾಗೂ ಪರವೂರಿನ ಭಕ್ತಾಭಿಮಾನಿಗಳನ್ನು ಪ್ರೀತಿ ಪೂರ್ವಕವಾಗಿ ಆಮಂತ್ರಿಸುವ ಪ್ರಧಾನ ಅರ್ಚಕರು, ಶ್ರೀ ಶಾಸ್ತಾರೇಶ್ವರ ಟ್ರಸ್ಟ್ ರಿ. ಮತ್ತು ಆಡಳಿತ ಸಮಿತಿ, ಭಜನಾ ಸಮಿತಿ ಹಾಗೂ ಉತ್ಸವ ಸಮಿತಿಯ ಎಲ್ಲಾ ಪದಾಧಿಕಾರಿಗಳು.