ಎಸ್ ಡಿ ಎಂ ಪಿಯು ಕಾಲೇಜಿನ ಪ್ರಾಂಶುಪಾಲರಾಗಿ ಪ್ರಮೋದ್ ಬಜಿರೆ

ಶೇರ್ ಮಾಡಿ

ಉಜಿರೆ:ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೋ ದಿನೇಶ್ ಚೌಟರವರು ನಿವೃತ್ತರಾದ ಹಿನ್ನಲೆಯಲ್ಲಿ ಉಪ ಪ್ರಾಂಶುಪಾಲರಾಗಿದ್ದ ಪ್ರಮೋದ್ ಬಜಿರೆ ಯವರನ್ನು ಪ್ರಾಂಶುಪಾಲರಾಗಿ ನೇಮಿಸಲಾಗಿದೆ.

ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳಲ್ಲಿ ಕಳೆದ 23 ವರುಷಗಳಿಂದ ಪ್ರಮೋದ್ ಬಜಿರೆ ರವರು ಇತಿಹಾಸ ಉಪನ್ಯಾಸಕರಾಗಿ,ಕೆ ಎಸ್ ಒ ಯು ಇದರ ಸಂಯೋಜಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಎಸ್ ಡಿ ಎಂ ಕ್ಯಾರಿಯರ್ ಗೈಡೆನ್ಸ್ ಸೆಂಟರಿನ ಸಂಚಾಲಕರಾಗಿ ಉದ್ಯೋಗವಕಾಶಗಳ ಕುರಿತು ಮಾಹಿತಿ ಶಿಬಿರಗಳನ್ನು ಆಯೋಜಿಸಿ ಹಲವು ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಜೈನ ಶಿಕ್ಷಕರ ವೇದಿಕೆಯ ಪೂರ್ವಾಧ್ಯಕ್ಷರಾಗಿ, ಜೈನ್ ಮಿಲನ್ ವಲಯ ಎಂಟರ ನಿರ್ದೇಶಕರಾಗಿ, ದ ಕ ಜಿಲ್ಲಾ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ.

See also  ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Leave a Reply

Your email address will not be published. Required fields are marked *

error: Content is protected !!