ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 62 ನೇ ವರ್ಷದ ಏಕಾಹ ಭಜನೆ

ಶೇರ್ ಮಾಡಿ

ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 62 ನೇ ವರ್ಷದ ಏಕಾಹ ಭಜನಾ ಮಹೋತ್ಸವ ಶುಕ್ರವಾರ ಮುಂಜಾನೆಯಿಂದ ಶನಿವಾರ ಮುಂಜಾನೆವರೆಗೆ ನಡೆಯಿತು.

ಶುಕ್ರವಾರ ಬೆಳಿಗ್ಗೆ ದೇವಳದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ ದೀಪ ಪ್ರಜ್ವಲನೆ ಮಾಡುವ ಮೂಲಕ ಭಜನೆಗೆ ಚಾಲನೆ ನೀಡಿದರು. ಆರಂಭದಲ್ಲಿ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಸದಸ್ಯರು ಭಜನಾ ಸೇವೆ ನೆರವೇರಿಸಿದರು. ಬಳಿಕ ವಿವಿಧ ಭಜನಾ ತಂಡದಿಂದ ಭಜನೆ ನೆರವೇರಿತು. ಸಂಜೆ ದುರ್ಗಾಪೂಜೆ ನೆರವೇರಿತು.

ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.. ಶ್ರೀಗಳನ್ನು, ಶ್ರೀಕಂಠ ಮತ್ತು ಮಹಾಗಣಪತಿ ದೇವಸ್ಥಾನದಿಂದ ಕಡಬ ಪೇಟೆಯಲ್ಲಿ ಮೆರವಣಿಗೆಯಲ್ಲಿ ಚೆಂಡೇವಾದನ, ಡೊಳ್ಳುಕುಣಿತ, ಕಿಲುಕುದುರೆ ತಂಡದ ಕುಣಿತದೊಂದಿಗೆ, ಪೂರ್ಣಕುಂಭ ಸ್ವಾಗತದ ಮೂಲಕ ಮೆರವಣಿಗೆಯಲ್ಲಿ ಶ್ರೀ ದುರ್ಗಂಬಿಕಾ ಅಮ್ಮನವರ ದೇವಸ್ಥಾನಕ್ಕೆ ಕರೆತರಲಾಯಿತು. ಏಕಹ ಭಜನೆಯ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಏಕಾಹ ಭಜನಾ ಸಮಿತಿಯ ಅಧ್ಯಕ್ಷ ಅಜಿತ್ ರೈ ಆರ್ತಿಲ, ಕಾರ್ಯದರ್ಶಿ ಕಿಶನ್ ಕುಮಾರ್ ರೈ ಪೆರಿಯಡ್ಕ, ಜತೆ ಕಾರ್ಯದರ್ಶಿ ಯಶೋ ಧರ ಗೌಡ ಪೂವಳ, ಕೋಶಾಧಿಕಾರಿ ಸೀತಾರಾಮ ಗೌಡ ಎ., ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನ್ಯಾಕ್, ಕಾರ್ಯದರ್ಶಿ ಮನೋಹರ ರೈ ಬೆದ್ರಾಜೆ, ಶ್ರೀ ಶ್ರೀ ಕಂಠ ಸ್ವಾಮಿ ಮತ್ತು ಶ್ರೀ ಮಹಾ ಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುತ್ತುಕುಮಾರ್, ಸರಸ್ವತೀ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್, ಧಾರ್ಮಿಕ ಉತ್ಸವ ಸಮಿತಿ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಕಡಬ ಎಸ್‌ಐ ಹರೀಶ್‌, ಅಶೋಕ್‌ ಕುಮಾರ್ ಪಿ., ಪ್ರಕಾಶ್ ಎನ್.ಕೆ., ಅಶೋಕ್ ಆಳ್ವ ಬೆದ್ರಾಜೆ, ಮೋನಪ್ಪ ಗೌಡ ನಾಡೋಳಿ, ವಿಶ್ವನಾಥ ರೈ ಪೆರ್ಲ, ಪ್ರಮೋದ್ ರೈ ನಂದುಗುರಿ, ಶಿವಪ್ರಸಾದ್ ರೈ ಮೈಲೇರಿ, ಸಂತೋಷ್ ಸುವರ್ಣ, ಸತ್ಯನಾರಾಯಣ ಹೆಗ್ಡೆ ನಡುಮಜಲು, ಜಿನ್ನಪ್ಪ ಸಾಲಿಯಾನ್‌, ರಾಧಾಕೃಷ್ಣ ಕೋಲ್ಪೆ ರಾಮಚಂದ್ರ ಕೋಲ್ಪೆ, ಪಿ.ವೈ.ಕುಸುಮಾ, ಪುಲಾಸ್ತ್ಯ ರೈ, ಗೀತಾ ಗೋಪಾಲಕೃಷ್ಣ ಕೇವಳ, ಶ್ರೀ ಕೃಷ್ಣ ಎಂ.ಆರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!