ಅರಸಿನಮಕ್ಕಿ:ಬೆಳ್ತಂಗಡಿ ತಾ ಅರಸಿನಮಕ್ಕಿಯಲ್ಲಿ ಮತ್ತೆ ರೈತರ ಕೃಷಿ ಭೂಮಿಗೆ ಕಾಡಾನೆಗಳ ದಾಳಿ ಮುಂದುವರೆದಿದ್ದು ಇಂದು ಮುಂಜಾನೆ ಕೊಡಿಯಡ್ಕ ಲಕ್ಷ್ಮೀ ಅಮ್ಮ ಇವರ ಅಡಿಕೆ ತೋಟದಲ್ಲಿ ಸಾಕಷ್ಟು ಕೃಷಿ ಹಾನಿಗೈದಿವೆ.
ಸುಮಾರು 300 ರಷ್ಟು ಬಾಳೆ ಗಿಡಗಳನ್ನು ಪುಡಿಗೈದಿರುವ ಆನೆಗಳು ಇದೀಗ ಪರಿಸರದ ಜನಸಾಮಾನ್ಯರನ್ನು ಭೀತಿಗೊಳಿಸಿದೆ.
ಅರಸಿನಮಕ್ಕಿ ಪರಿಸರದ ಹೊಸ್ತೋಟ, ಪಲಸ್ತಡ್ಕ, ಉಪ್ಪರಡ್ಕ, ಕೊಡಿಯಡ್ಕ ಪರಿಸರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆನೆಗಳು ಕೃಷಿ ಭೂಮಿಗೆ ನಿರಂತರ ಧಾಳಿಯಿಟ್ಟು ಬಡ ರೈತರ ಬೆಳೆ ಹಾನಿ ಮಾಡುತ್ತಿವೆ.
ಅರಣ್ಯ ಇಲಾಖೆ ಆನೆಗಳನ್ನು ದಟ್ಟ ಕಾಡಿಗೆ ಅಟ್ಟುವ ಕೆಲಸ ಕೂಡಲೇ ಮಾಡಬೇಕೆಂಬುದು ಗ್ರಾಮಸ್ಥರ ಆಗ್ರಹ.