ಸುಳ್ಯ: ತಂದೆ-ಮಗನ ‘ಕೋಳಿಸಾರು’ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

ಶೇರ್ ಮಾಡಿ

ಸುಳ್ಯ: ಕೋಳಿ ಸಾರು ವಿಚಾರದಲ್ಲಿ ತಂದೆ ಮತ್ತು ಮಗನ ನಡುವಿನ ಜಗಳ ಮಗನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಗುತ್ತಿಗಾರು-ಮೊಗ್ರ ಎಂಬಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿರುವುದು ವರದಿಯಾಗಿದೆ.

ಕೊಲೆಯಾದವರನ್ನು ಮೊಗ್ರ ಏರಣಗುಡ್ಡೆಯ ಮಾತೃಮಜಲು ನಿವಾಸಿ ಶಿವರಾಮ(32) ಎಂದು ಗುರುತಿಸಲಾಗಿದೆ. ಮೃತರ ತಂದೆ ಶೀನ ಕೊಲೆ ಆರೋಪಿಯಾಗಿದ್ದು, ಆತನನ್ನು ಸುಬ್ರಹ್ಮಣ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಳೆದ ರಾತ್ರಿ ಮನೆಯಲ್ಲಿ ಕೋಳಿಸಾರು ಮಾಡಲಾಗಿತ್ತೆನ್ನಲಾಗಿದೆ. ಶಿವರಾಮ ಮನೆಗೆ ಬರುವಾಗ ತಡವಾಗಿದ್ದು, ಈ ವೇಳೆ ಕೋಳಿಸಾರು ಮುಗಿದಿತ್ತೆನ್ನಲಾಗಿದೆ. ಶಿವರಾಮ ಇದನ್ನು ಆಕ್ಷೇಪಿಸಿ ಮಾತನಾಡಿದ್ದಾರೆ. ಈ ವಿಚಾರವಾಗಿ ರಾತ್ರಿ 12 ಗಂಟೆ ಸುಮಾರಿಗೆ ತಂದೆ ಶೀನ ಮತ್ತು ಶಿವರಾಮರ ನಡುವೆ ಜಗಳವೇ ನಡೆದಿದೆ. ಈ ವೇಳೆ ಕೋಪಗೊಂಡ ಶೀನ ಬಡಿಗೆಯಿಂದ ಶಿವರಾಮರ ತಲೆಗೆ ಬಲವಾಗಿ ಹೊಡೆದನೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಶಿವರಾಮ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ವಿಷಯ ತಿಳಿದು ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಶೀನನನ್ನು ಬಂಧಿಸಿದ್ದಾರೆ. ಶಿವರಾಮರ ಮೃತದೇಹವನ್ನು ಕಡಬ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಶಿವರಾಮ ಅವರು ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ

See also  ಯುವಕನ ಕೊಲೆಯತ್ನ; ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

Leave a Reply

Your email address will not be published. Required fields are marked *

error: Content is protected !!