ದಾಖಲೆಯಿಲ್ಲದೆ ಎಟಿಎಂ ವಾಹನದಲ್ಲಿ ಸಾಗಿಸುತ್ತಿದ್ದ 10 ಲಕ್ಷ ರೂ. ವಶ

ಶೇರ್ ಮಾಡಿ

ಬೆಳ್ತಂಗಡಿ: ದಾಖಲೆ ಇಲ್ಲದೆ 10 ಲಕ್ಷ ರೂ. ಸಾಗಾಟ ಮಾಡುತ್ತಿದ್ದ ಎಟಿಎಂ ವಾಹನವನ್ನು ಬೆಳ್ತಂಗಡಿ ತಾಲೂಕಿನ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎ.10 ರಂದು ರಾತ್ರಿ 10 ಗಂಟೆಗೆ ವಶಕ್ಕೆ ಪಡೆದಿದ್ದಾರೆ.

ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರತರಾಗಿದ್ದ ಫ್ಲೈಯಿಂಗ್ ಸ್ಕ್ವಾಡ್ ಕಾರ್ತಿ ಮಧುಬಾಬು ಅವರ ತಂಡ ಕುಕ್ಕಳ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ KA-53C 2542 ವಾಹನದಲ್ಲಿ ಸಮರ್ಪಕ ದಾಖಲೆಗಳಿಲ್ಲದೆ ಅವಧಿ ಮೀರಿ 10 ಲಕ್ಷ ರೂ. ಮೊತ್ತವನ್ನು ರಾತ್ರಿ 10 ಗಂಟೆ ಸುಮಾರಿಗೆ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಕುರಿತು ತಕ್ಷಣವೇ ಹಣ ಹಾಗೂ ವಾಹನವನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

See also  ಮಾರಾಟಕ್ಕೆ ನಿಷೇಧವಿದ್ದ ಸಿಮೆಂಟ್ ಮಾರಾಟ-ತಹಶೀಲ್ದಾರ್ ನೇತೃತ್ವದಲ್ಲಿ ತಂಡ ದಾಳಿ

Leave a Reply

Your email address will not be published. Required fields are marked *

error: Content is protected !!