ಕಡಬ: ಮರ್ದಾಳ ನಿವಾಸಿ ಶಫೀಕ್ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ

ಶೇರ್ ಮಾಡಿ

ಕಡಬ : ಮರ್ದಾಳ ನಿವಾಸಿ ಶಫೀಕ್ ಎಂಬಾತ ಇಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಂದು ನಿದ್ದೆಯಿಂದ ಎದ್ದಿದ್ದ ಶಫೀಕ್ ರವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ವೇಳೆಗಾಗಲೇ ಅವರು ಮೃತಪಟ್ಟಿರುತ್ತಾರೆ ಎನ್ನಲಾಗಿದೆ. ಶಫೀಕ್ ರವರ ಮೃತ ದೇಹವನ್ನು ಅವರ ನಿವಾಸ ಮರ್ದಾಳ ಕ್ಕೆ ತರಲಾಗುತ್ತಿದೆ ಎನ್ನಲಾಗಿದೆ.
ಮೃತ ಶಫೀಕ್ ರವರು ಬೆಂಗಳೂರಿನ ಯಲಹಂಕದ ಬಳಿ ಇರುವ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

Leave a Reply

error: Content is protected !!