ಮೀನುಗಾರರ ಬಲೆಗೆ ಆಕಸ್ಮಿಕ ಬೆಂಕಿ: 15 ಲಕ್ಷಕ್ಕೂ ಅಧಿಕ ನಷ್ಟ

ಶೇರ್ ಮಾಡಿ

ಉಳ್ಳಾಲ: ಸೋಮೇಶ್ವರ ಸಮುದ್ರ ತಟದ ರುದ್ರಪಾದೆ ಬಳಿ ಇರಿಸಿದ್ದ ನಾಡದೋಣಿ ಮೀನುಗಾರರ ಬಲೆಗಳು ಆಕಸ್ಮಿಕ ಬೆಂಕಿ ಅನಾಹುತದಿಂದ‌ ಸುಟ್ಟು ಕರಕಲಾಗಿದ್ದು, ಸುಮಾರು 15 ಲಕ್ಷಕ್ಕೂ ಅಧಿಕ ನಷ್ಟ ಅಂದಾಜಿಸಲಾಗಿದೆ.

ನಾಡ ದೋಣಿ ಮೀನುಗಾರರಾದ ಹೇಮಂತ್ ಉಚ್ಚಿಲ, ಸಂತೋಷ್ ಉಚ್ಚಿಲ, ಸಾಧನ ಉಚ್ಚಿಲ, ಶೇಖರ್ ಸೋಮೇಶ್ವರ, ಯೋಗೀಶ್ ಸೋಮೇಶ್ವರ ಅವರ ಮೀನಿನ ಬಲೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಕಳೆದ ಮಾರ್ಚ್ ತಿಂಗಳಲ್ಲೂ ಇದೇ ಪ್ರದೇಶದಲ್ಲಿ ಎರಡು ನಾಡ ದೋಣಿ ಮತ್ತು ಅದರಲ್ಲಿದ್ದ ಮೀನಿನ ಬಲೆಗಳು ಬೆಂಕಿ ಆಕಸ್ಮಿಕದಿಂದ ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿತ್ತು. ಈ ಬಾರಿ ಬಿಸಿಲಿನ ಝಳ ಹೆಚ್ಚಾಗಿದ್ದು, ಘಟನೆಗೆ ಬಿಸಿಲಿನ ಝಳ ಹೆಚ್ಚಾಗಿಯೋ ಅಥವಾ ಕಿಡಿಗೇಡಿಗಳ ಕೃತ್ಯದ ಬಗ್ಗೆ ಸಂಶಯ ವ್ಯಕ್ತವಾಗಿದೆ.

ಸ್ಥಳಕ್ಕೆ ಬಿಜೆಪಿ ಮುಖಂಡರಾದ ಸತೀಶ್ ಕುಂಪಲ ಭೇಟಿ ನೀಡಿ ಬಡ ಮೀನುಗಾರರಿಗೆ ಶೀಘ್ರವೆ ಸೂಕ್ತ ಪರಿಹಾರ ತೆಗೆಸಿ ಕೊಡುವಂತೆ ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!