ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವ: ಎಲ್‌ಐಸಿಯಿಂದ 300 ವಿಮಾ ಗ್ರಾಮಗಳ ಘೋಷಣೆ

ಶೇರ್ ಮಾಡಿ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಂತೆ ಗ್ರಾಮಾಭಿವೃದ್ಧಿ ಯೋಜನೆಯು ಸ್ವ ಸಹಾಯ ಸಂಘಗಳ ಸದಸ್ಯರಿಗೆ ಮತ್ತು ಅವರ ಕುಟುಂಬಗಳಿಗೆ ವಿಮಾ ಭದ್ರತೆ ನೀಡುವ ಕೆಲಸವನ್ನು ಕಳೆದ ಎರಡು ದಶಕಗಳಿಂದ ಮಾಡುತ್ತ ಬಂದಿದ್ದು, ರಾಜ್ಯದ ಸುಮಾರು 20,09,650 ರಷ್ಟು ಮಂದಿ ಇದರ ಪ್ರಯೋಜನೆ ಪಡೆದಿದ್ದಾರೆ ಎಂದು ಸಿಇಒ ಡಾ| ಎಲ್‌. ಎಚ್‌. ಮಂಜುನಾಥ್‌ ತಿಳಿಸಿದ್ದಾರೆ.

ಯೋಜನೆಯ ಸಂಘಗಳ ಸದಸ್ಯರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ 2007ರಿಂದ ಗ್ರಾಮಾಭಿವೃದ್ಧಿ ಯೋಜ ನೆಯು ಭಾರತೀಯ ಜೀವ ವಿಮಾ ನಿಗಮದೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಕಡಿಮೆ ಪ್ರೀಮಿಯಂನ ವಿಶೇಷ ಪಾಲಿಸಿಗಳನ್ನು ಪರಿ ಚಯಿಸಲಾಗುತ್ತಿದೆ. ಪ್ರಸ್ತುತ ಮೈಕ್ರೋಬಚತ್‌ ಮತ್ತು ಭಿಮಾ ಜ್ಯೋತಿ ಪಾಲಿಸಿಗಳ ಪ್ರಯೋಜನ ವನ್ನು ಸದಸ್ಯರು ಪಡೆಯುತ್ತಿದ್ದಾರೆ.

ಮೈಕ್ರೋಬಚತ್‌ ಪಾಲಿಸಿಯಡಿ ವಿಮಾಗ್ರಾಮ ಗುರುತಿಸುವ ವಿಶೇಷ ಕಾರ್ಯ ಭಾರತೀಯ ಜೀವ ವಿಮಾ ನಿಗಮವು ಮಾಡುತ್ತಿದೆ. ಈಗಾಗಲೇ ರಾಜ್ಯದಾದ್ಯಂತ 11,93,000 ಮಂದಿ ಮೈಕ್ರೋಬಚತ್‌ ಪಾಲಿಸಿ ಮಾಡಿಸಿರುತ್ತಾರೆ.

ಈಗಾಗಲೇ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಲ್ಲಿ ರಾಜ್ಯದಾದ್ಯಂತ 300 ವಿಮಾ ಗ್ರಾಮಗಳನ್ನು ಗುರುತಿಸಿ 1,02,90,000 ರೂ. ವೆಚ್ಚದ ಸೌಲಭ್ಯ ಒದಗಿಸಲಾಗಿದೆ. ದಾವಣ ಗೆರೆ ಪ್ರೌಢ ಶಾಲೆಯಲ್ಲಿ 168 ವಿದ್ಯಾರ್ಥಿಗಳಿದ್ದು, ಇದುವರೆಗೆ ತಮ್ಮ ಮನೆಗಳಿಂದ ಕುಡಿಯುವ ನೀರು ತರುತ್ತಿದ್ದರು. ಪ್ರಸ್ತುತ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಯಿಂದಾಗಿ ಎಲ್ಲರಿಗೂ ಕುಡಿಯಲು ಶುದ್ಧ ನೀರು ದೊರಕುತ್ತಿದ್ದು ತುಂಬಾ ಪ್ರಯೋಜನವಾಗಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ| ಎಲ್‌.ಎಚ್‌. ಮಂಜುನಾಥ್‌ ತಿಳಿಸಿದ್ದಾರೆ.

2000 ಜನರಿರುವ ಗ್ರಾಮದಲ್ಲಿ ಕನಿಷ್ಠ 75 ಮಂದಿ ಹಾಗೂ 5000 ಮಂದಿ ಇರುವಲ್ಲಿ ಕನಿಷ್ಠ 100 ಮಂದಿ ವಿಮಾ ಯೋಜನೆಗೆ ನೊಂದಾಯಿಸಿರಬೇಕು. ಜನಸಂಖ್ಯೆ 5001 ರಿಂದ 10,000 ಇರುವಲ್ಲಿ ಕನಿಷ್ಠ 150 ವಿಮೆ ನೊಂದಾಯಿಸಿರಬೇಕು. ಗ್ರಾ.ಪಂ. ವತಿಯಿಂದ ಗ್ರಾಮದ ಜನಸಂಖ್ಯೆ ಕುರಿತು ದೃಢೀಕರಣ ನೀಡುವುದು ಕಡ್ಡಾಯವಾಗಿದೆ ಎಂದಿದ್ದಾರೆ.

Leave a Reply

error: Content is protected !!