ನೂಜಿಬಾಳ್ತಿಲ: ನೂಜಿಬಾಳ್ತಿಲ ಮರಿಯಾಲಯಂ ಸೋಶಿಯಲ್ ಸೆಂಟರ್ ಮಾನಸಿಕ ಅಸ್ವಸ್ಥ ಹಾಗೂ ವೃದ್ಧ ಮಹಿಳೆಯರ ಪಾಲನಾ ಕೇಂದ್ರದ ಕಟ್ಟಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗಾಹುತಿ ಆದ ಘಟನೆ ಎ.13ರ ಬೆಳಗ್ಗೆ 3:00 ಸುಮಾರಿಗೆ ಸಂಭವಿಸಿದೆ.
ನೂಜಿಬಾಳ್ತಿಲ ಮಾನಸಿಕ ಅಸ್ವಸ್ಥ ಹಾಗೂ ವೃದ್ಧ ಮಹಿಳೆಯರ ಪಾಲನಾ ಕೇಂದ್ರದ ವಿಶ್ರಾಂತಿ ಮತ್ತು ಶೌಚಾಲಯದ ಕಟ್ಟಡದಲ್ಲಿ ತೆರೆದ ಬಾವಿಯಿಂದ ನೀರೆತ್ತುವ ವಿದ್ಯುತ್ ಪಂಪಿನ ವಿದ್ಯುತ್ ಸ್ಥಾವರವನ್ನು ಅಳವಡಿಸಲಾಗಿದ್ದು. ಈ ವಿದ್ಯುತ್ ಸ್ಥಾವರದಿಂದ ಬೆಂಕಿ ಕಿಡಿ ಹಾರಿ ಸದರಿ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡು ಕಟ್ಟಡ ಹಾಗೂ ಕಟ್ಟಡದ ಕೋಣೆಗಳಲ್ಲಿ ದಾಸ್ತಾನು ಇರಿಸಲಾದ 10 ಕ್ವಿಂಟಲ್ ನಷ್ಟು ರಬ್ಬರ್ ಸ್ಕ್ರಾಪ್ ಗಳು, 15,000 ದಷ್ಟು ತೆಂಗಿನಕಾಯಿಗಳು, 15 ಕ್ವಿಂಟಲ್ ನಷ್ಟು ಒಣಗಿಸಿದ ಸಿಪ್ಪೆ ತೆಗೆಯದ ಅಡಿಕೆ, ವಿದ್ಯುತ್ ಸಾಮಾಗ್ರಿಗಳು, ಮರದ ಮಂಚ, ಮೇಜು, ಕುರ್ಚಿಗಳು ಸೇರಿದಂತೆ ಇತರ ಪೀಠೋಪಕರಣಗಳು ಬೆಂಕಿಗಾಹುತಿಯಾಗಿದೆ.
ಸ್ಥಳಕ್ಕೆ ಮೆಸ್ಕಾಂ ಜೆ.ಇ. ವಸಂತ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಂಗಮ್ಮ ಪಿಡಿಒ ಗುರುವ, ಗ್ರಾಮ ಲೆಕ್ಕಾಧಿಕಾರಿ ಶಶಿಕಲಾ, ಪಂಚಾಯತ್ ಉಪಾಧ್ಯಕ್ಷ ಇಮ್ಯಾನುವೆಲ್ ಸದಸ್ಯರಾದ ಚಂದ್ರಶೇಖರ ಹಳೆನೂಜಿ ಭೇಟಿ ನೀಡಿದ್ದಾರೆ.