ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ )ಕಡಬ, ನಿವೇದಿತಾ ಜ್ಞಾನವಿಕಾಸ ಕೇಂದ್ರ ಕೊಣಾಜೆ ಇದರ ಸದಸ್ಯಯಾದ ಶ್ರೀಮತಿ ಆಶಾಲತಾ ದಯಾನಂದ ಪೂಜಾರಿ ರವರು ಮಾಸ್ಟರ್ ಅತ್ಲೇಟಿಕ್ ಅಸೋಸಿಯೇಶನ್ಸ್ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟ 2023( 5000 ಮೀಟರ್ ರನ್ನಿಂಗ್ ರೇಸ್ ತೃತೀಯ, 5,000 ವಾಕಿಂಗ್ ರೇಸ್ ದ್ವಿತೀಯ 800 ಮೀಟರ್ ಓಟದಲ್ಲಿ ಪ್ರಥಮ 400 ಮೀಟರ್ ರೀಲೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರನ್ನು ನಿವೇದಿತ ಜ್ಞಾನವಿಕಾಸ ಕೇಂದ್ರದ ವತಿಯಿಂದ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಯುತ ಮೇದಪ್ಪ ಗೌಡ ಎನ್ ಅಭಿನಂದಿಸಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರಾದ ಶ್ರೀಮತಿ ಆಶಾಲತಾ ರವರು ರಾಷ್ಟ್ರ ಮಟ್ಟದ ಕ್ರೀಡಾಕೂಟ ದಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ವಾಗಿದೆ ಅವರ ಸಾಧನೆ ಗೆ ಪ್ರೋತ್ಸಾಹಿಸಿದ ಅವರ ಪತಿ ದಯಾನಂದ ಪೂಜಾರಿಯವರ ವ್ಯಕ್ತಿತ್ವವನ್ನು ಮೆಚ್ಚುವಂಥದ್ದು ಎಂದು ಅಭಿನಂದಿಸಿ ಶುಭ ಹಾರೈಸಿದರು.ಕೇಂದ್ರದ ಸದಸ್ಯರು ಆಶಾಲತಾ ದಂಪತಿಗಳನ್ನು ಫಲ ಪುಷ್ಪ ಸ್ಮರಣಿಕೆ ನೀಡಿ ಅಭಿನಂದಿಸಿದರು ಹಾಗೂ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಕೆ ಸ್ಥಳೀಯ ಒಕ್ಕೂಟದ ಅಧ್ಯಕ್ಷರಾದ ಡೀಕಯ್ಯ ಗೌಡ, ಒಕ್ಕೂಟದ ಕಾರ್ಯದರ್ಶಿ ಪ್ರಶಾಂತ್, ಮೇಲ್ವಿಚಾರಕರಾದ ಆನಂದ ಡಿ ಬಿ ಉಪಸ್ಥಿತರಿದ್ದರು.
ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಚೇತನ ಜಿ ಕಾರ್ಯಕ್ರಮ ಆಯೋಜಿಸಿದರು, ಕೇಂದ್ರದ ಸದಸ್ಯೆ ಗಿರಿಜಾ ಕಾರ್ಯಕ್ರಮ ನಿರೂಪಿಸಿದರು. ವೀಣಾ ಭಟ್ ಸ್ವಾಗತಿಸಿದರು ಕುಸುಮಾವತಿ ವರದಿ ವಾಚಿಸಿದರು, ಸೇವಾಪ್ರತಿನಿಧಿ ಬೇಬಿ ವಂದಿಸಿದರು ಸದಸ್ಯರೆಲ್ಲರೂ ಸಹಕರಿಸಿದರು