ಸೆಂಟ್ರಲ್ ಬ್ಯಾಂಕ್‌ ಆಫ್‌ ಇಂಡಿಯಾ’ದಿಂದ 5000 ಹುದ್ದೆಗಳ ನೇಮಕ: ಅರ್ಜಿಗೆ ಏ.22 ರವರೆಗೆ ಅವಕಾಶ

ಶೇರ್ ಮಾಡಿ

ಸೆಂಟ್ರಲ್ ಬ್ಯಾಂಕ್‌ ಆಫ್‌ ಇಂಡಿಯಾ’ವು ದೇಶದ ಪ್ರಮುಖ ಪಬ್ಲಿಕ್ ಸೆಕ್ಟಾರ್ ಬ್ಯಾಂಕ್‌. ದೇಶದ ಬ್ರ್ಯಾಂಚ್ ಗಳಲ್ಲಿ ಖಾಲಿ ಇರುವ ಅಗತ್ಯ 5000 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಮಾರ್ಚ್‌ ತಿಂಗಳಲ್ಲಿ ಅಧಿಸೂಚಿಸಿ ಅರ್ಜಿ ಆಹ್ವಾನಿಸಲಾಗಿತ್ತು. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇದೀಗ ಅವಧಿ ವಿಸ್ತರಣೆ ಮಾಡಿದೆ. ಈ ಹಿಂದೆ ಏಪ್ರಿಲ್ 03 ರವರೆಗೆ ಅರ್ಜಿಗೆ ಅವಕಾಶ ನೀಡಲಾಗಿತ್ತು. ಇದೀಗ ದಿನಾಂಕ ವಿಸ್ತರಣೆ ಮಾಡಿ ಏಪ್ರಿಲ್ 22 ರವರೆಗೆ ಅವಕಾಶ ನೀಡಲಾಗಿದೆ.

ಹುದ್ದೆಗಳ ವಿವರ
ಸೆಂಟ್ರಲ್ ಬ್ಯಾಂಕ್‌ ಆಫ್‌ ಇಂಡಿಯಾ ಅಪ್ರೆಂಟಿಸ್ ಹುದ್ದೆಗಳು: 5000
ಕರ್ನಾಟಕದ ಸಿಬಿಐ ಬ್ರ್ಯಾಂಚ್‌ಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ : 70
ಸಿಬಿಐ ಅಪ್ರೆಂಟಿಸ್ ಪೋಸ್ಟ್‌ಗಳಿಗೆ ಶೈಕ್ಷಣಿಕ ಅರ್ಹತೆ : ಯಾವುದೇ ಪದವಿ ಪಾಸ್.

ಇತರೆ ಅರ್ಹತೆಗಳು

  • ಸೆಂಟ್ರಲ್ ಬ್ಯಾಂಕ್‌ ಆಫ್‌ ಇಂಡಿಯಾದ ಅಪ್ರೆಂಟಿಸ್ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅಪ್ಲಿಕೇಶನ್‌ ಸಲ್ಲಿಸುವುದು ಹೇಗೆ?
ಸೆಂಟ್ರಲ್ ಬ್ಯಾಂಕ್‌ ಆಫ್‌ ಇಂಡಿಯಾ ವೆಬ್‌ಸೈಟ್‌ ವಿಳಾಸ https://www.apprenticeshipindia.gov.in/ ಗೆ ಭೇಟಿ ನೀಡಿ.

  • ಓಪನ್‌ ಆದ ಪೇಜ್‌ನಲ್ಲಿ ಕರಿಯರ್ ಸೆಕ್ಷನ್‌ ಗೆ ಭೇಟಿ ನೀಡಿ.
  • ಅಪ್ರೆಂಟಿಸ್‌ ಪೋಸ್ಟ್‌ಗಳ ಅರ್ಜಿಗೆ ನೀಡಲಾದ ಲಿಂಕ್ ಕ್ಲಿಕ್ ಮಾಡಿ.
  • ನಂತರ ಓಪನ್ ಆಗುವ ಪೇಜ್‌ನಲ್ಲಿ ಕೇಳಲಾದ ಮಾಹಿತಿಗಳನ್ನು ಟೈಪಿಸಿ ರಿಜಿಸ್ಟ್ರೇಷನ್‌ ಪಡೆಯಿರಿ.

ಆಯ್ಕೆ ವಿಧಾನ: ಆನ್‌ಲೈನ್ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಹಾಗೂ ಅಭ್ಯರ್ಥಿಗಳು ಯಾವ ರಾಜ್ಯದಿಂದ ಅರ್ಜಿ ಸಲ್ಲುಸುವರೋ ಆ ರಾಜ್ಯದ ಅಧಿಕೃತ ಸ್ಥಳೀಯ ಭಾಷೆಯಲ್ಲಿ ಪರಿಣಿತರಾಗಿರಬೇಕು.

ಆನ್‌ಲೈನ್‌ ಲಿಖಿತ ಪರೀಕ್ಷೆಯಲ್ಲಿ ಈ ಕೆಳಗಿನ ವಿಷಯ / ವಿಭಾಗಗಳಲ್ಲಿ ಪ್ರಶ್ನೆಗಳು ಇರುತ್ತವೆ.

  • ಬೇಸಿಕ್ ರೀಟೆಲ್ ಲಿಯೇಬಿಲಿಟಿ ಪ್ರಾಡಕ್ಟ್‌.
  • ಬೇಸಿಕ್ ರೀಟೆಲ್ ಅಸೆಟ್ ಪ್ರಾಡಕ್ಟ್‌.
  • ಬೇಸಿಕ್ ಇನ್‌ವೆಸ್ಟ್‌ಮೆಂಟ್ ಪ್ರಾಡಕ್ಟ್‌.
  • ಬೇಸಿಕ್ ಇನ್ಸುರೆನ್ಸ್‌ ಪ್ರಾಡಕ್ಟ್‌.
  • ಕ್ವಾಂಟಿಟೇಟಿವ್, ಜೆನೆರಲ್ ಇಂಗ್ಲಿಷ್, ರೀಸನಿಂಗ್ ಆಪ್ಟಿಟ್ಯೂಡ್ ಮತ್ತು ಕಂಪ್ಯೂಟರ್ ಜ್ಞಾನ.
    ಪರೀಕ್ಷೆ ಬರೆದವರನ್ನು ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ 1:4 ಅನುಪಾತದಲ್ಲಿ ಸಂದರ್ಶನಕ್ಕೆ ಕರೆದು ಮೆರಿಟ್ ಹಾಗೂ ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

ಅಪ್ರೆಂಟಿಸ್ ಹುದ್ದೆಗಳಿಗೆ ವೇತನ
ಗ್ರಾಮೀಣ ಮತ್ತು ಅರೆ -ನಗರ ಶಾಖೆಗಳಲ್ಲಿ ಸ್ಟ್ರೈಫಂಡ್ ರೂ.10,000.
ನಗರ ಶಾಖೆಗಳಲ್ಲಿ ಸ್ಟ್ರೈಫಂಡ್ ರೂ.12,000.
ಮೆಟ್ರೊ ನಗರಗಳಲ್ಲಿ ಸ್ಟ್ರೈಫಂಡ್ ರೂ.15,000.

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಫೀಶಿಯಲ್ ವೆಬ್‌ಸೈಟ್‌ ವಿಳಾಸ : https://www.centralbankofindia.co.in/en

Leave a Reply

error: Content is protected !!