ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ನೆಲ್ಯಾಡಿ ಕರಯೋಗಂ ಮಹಿಳಾ ವಿಭಾಗದವರಿಂದ “ವಿಷು ಕಣಿ ” ಆಚರಣೆ

ಶೇರ್ ಮಾಡಿ

ನೇಸರ ಎ.15 :ವಿಷು ಹಬ್ಬದ ಅಂಗವಾಗಿ ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ನೆಲ್ಯಾಡಿ ಕರಯೋಗಂ ಮತ್ತು ಮಹಿಳಾ ವಿಭಾಗ ಐಶ್ವರ್ಯ ಇವುಗಳ ಸಹಭಾಗಿತ್ವದಲ್ಲಿ  ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ, ನೆಲ್ಯಾಡಿ ಕರಯೋಗಂ ಸಭಾಭವನದಲ್ಲಿ “ವಿಷು ಕಣಿ ” ಆಚರಣೆ  ಎ.15 ರಂದು ನಡೆಯಿತು.ನೆಲ್ಯಾಡಿ ಕರಯೋಗಂನ ಅಧ್ಯಕ್ಷರು ,ಮಹಿಳಾ ವಿಭಾಗದ ಅಧ್ಯಕ್ಷೆ,ಕಾರ್ಯದರ್ಶಿಗಳು,ಯುತ್ ವಿಂಗ್ ಪ್ರತಿನಿಧಿಗಳು ಹಾಗೂ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಕರಾವಳಿ ಭಾಗದವರು ಹಾಗೂ ಕೇರಳದವರು ಭಕ್ತಿ ಪ್ರೀತಿಗಳಿಂದ ಆಚರಿಸುವ ವಿಷು ಕಣಿ ಹಬ್ಬದ ಈ ಆಚರಣೆ ತಂಬಾ ಅರ್ಥಪೂರ್ಣವಾದುದು. ವಿಷು ಅಥವಾ ತುಳುನಾಡಿನಲ್ಲಿ ಇದನ್ನು ಬಿಸು ಎನ್ನುತ್ತಾರೆ. ಇದು ಸೌರಮಾನ ಪದ್ಧತಿಯ ಮೂಲಕ ಬರುವ ಯುಗಾದಿ. ಚಾಂದ್ರಮಾನ ಯುಗಾದಿಯಂತೆಯೇ ಸೌರಮಾನ ಯುಗಾದಿಯನ್ನು ಕೂಡ ದೇಶದ ನಾನಾ ಕಡೆ ವರ್ಷದ ಮೊದಲ ದಿನವಾಗಿ ಆಚರಿಸುತ್ತಾರೆ. ಸಾಮಾನ್ಯವಾಗಿ ಇವೆರಡೂ ಒಂದೇ ತಿಂಗಳಲ್ಲಿ, ಬೇರೆ ಬೇರೆ ದಿನ ಬರುತ್ತವೆ.

“ವಿಷು ಕಣಿ” ವಿಷು ಹಬ್ಬದ ವಿಶೇಷವಾಗಿದ್ದು ದೇವರ ವಿಗ್ರಹದ ಮುಂದೆ ನವದಾನ್ಯಗಳು, ಕನ್ನಡಿ, ಬಟ್ಟೆಬರೆ, ಬಂಗಾರದ ಆಭರಣ, ಹಣ, ಫಲವಸ್ತುಗಳು ಇತ್ಯಾದಿ ವಸ್ತುಗಳನ್ನು ಇಡುವ ಸಂಪ್ರದಾಯವಿದ್ದು ಇದನ್ನು ವಿಷು ಕಣಿ ಎನ್ನುತ್ತಾರೆ. 

ವಿಷು ಹಬ್ಬದ ಸಂದರ್ಭದಲ್ಲಿ ಅರಳುವ ಹಳದಿ ಬಣ್ಣದ ಗೊಂಚಲು ಗೊಂಚಲಾಗಿರುವ “ಕೊನ್ನ ಪೂ” ಎಂಬ ಹೂವು ಈ ಹಬ್ಬದ ಪ್ರಧಾನ ಆಕರ್ಷಣೆಯಾಗಿದ್ದು ಕೊನ್ನ ಪೂವನ್ನು ಇಟ್ಟು ಪೂಜೆ ಸಲ್ಲಿಸುವರು . ಹಬ್ಬದ ಪ್ರಯುಕ್ತ  ಸಾಂಪ್ರದಾಯಿಕ  ಉಡುಗೆ ತೊಟ್ಟು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವರು. ವಿಷು ಹಬ್ಬದಲ್ಲಿ ಮನೆಯ ಹಿರಿಯರಿಂದ ಕಿರಿಯರು ಹಣವನ್ನು ಕಾಣಿಕೆಯಾಗಿ ಪಡೆಯುವ ಸಂಪ್ರದಾಯವಿದ್ದು ಇದನ್ನು “ಕೈನೀಟ” ಎನ್ನಲಾಗುತ್ತದೆ. 

ನೇಸರ ನ್ಯೂಸ್ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ🙏

ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಪರಿವಾರ ದೈವಗಳ ನರ್ತನ ಸೇವೆ

–ಜಾಹೀರಾತು–

Leave a Reply

error: Content is protected !!