ಹಿಂದುತ್ವದ ಹೋರಾಟದ ಕೇಸನ್ನು ಕೆದಕುವ ಮೂಲಕ ತನ್ನ ಸ್ಪರ್ಧೆಗೆ ಅಡ್ಡಿ:ಅರುಣ್ ಪುತ್ತಿಲ

ಶೇರ್ ಮಾಡಿ

ಪುತ್ತೂರು : ನನ್ನ ಮೇಲೆ 28 ಕೇಸು ಇದೆ. ಆದರೆ ಈ ಕೇಸು ನನ್ನ ವೈಯಕ್ತಿಕ ವಿಚಾರಕ್ಕೆ ಅಲ್ಲ. ಮತಾಂತರ, ಲವ್ ಜೆಹಾದ್ ಮೊದಲಾದವುಗಳ ವಿರುದ್ಧದ ಹೋರಾಟಕ್ಕಾಗಿ. ಕಳೆದ 30 ವರ್ಷದಿಂದ ಮನೆ ಮಂದಿಯ ಬಗ್ಗೆಯು ಚಿಂತಿಸದೆ ಹಿಂದೂ ಸಮಾಜಕೋಸ್ಕರ ಬದುಕನ್ನು ಮುಡಿಪಾಗಿ ಇಟ್ಟಿದ್ದೇನೆ. ಆದರೆ ಹಿಂದುತ್ವದ ಹೋರಾಟದ ಕೇಸನ್ನು ಕೆದಕುವ ಮೂಲಕ ತನ್ನ ಸ್ಪರ್ಧೆಗೆ ಅಡ್ಡಿ ಉಂಟು ಮಾಡುತ್ತಿರುವವರ ಸಂಚು ನಡೆಯುತ್ತಿದೆ. ಇದರ ವಿರುದ್ಧ ಹಿಂದೂ ಸಮಾಜವೇ ಉತ್ತರ ನೀಡಲಿದೆ ಎಂದು ಹಿಂದೂ ಸಂಘಟನೆಯ ಪ್ರಭಾವಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಕಣ್ಣಿರಿಟ್ಟ ಘಟನೆ ಎ.15 ರಂದು ನಡೆದಿದೆ.

ಪುತ್ತೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡದಿರುವ ಹಿನ್ನೆಲೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಲು ಅರುಣ್ ಪುತ್ತಿಲ ತೀರ್ಮಾನಿಸಿದ್ದು ಇದರ ಬೆನ್ನಲ್ಲೇ ಅವರ ಮೇಲಿನ ಹಳೆ ಪ್ರಕರಣವನ್ನು ಮತ್ತೆ ತೆರದು ಸ್ಪರ್ಧೆಗೆ ಅಡ್ಡಿ ಉಂಟು ಮಾಡಲಾಗುತ್ತಿದೆ ಎನ್ನಲಾಗಿದ್ದು, ಈ ಬಗ್ಗೆ ಶನಿವಾರ ಅವರು ಭಾವುಕರಾಗಿ ಪ್ರತಿಕ್ರಿಯಿಸಿದರು.

ತಾನು ಕಳೆದ 30 ವರ್ಷದಿಂದ ಹಿಂದುತ್ವಕೋಸ್ಕರ ಹೋರಾಟ ನಡೆಸಿದ್ದೇನೆ. ಬಿಜೆಪಿಗಾಗಿಯೂ ದುಡಿದ್ದೇನೆ. ಆದರೆ ಪಕ್ಷದ ಕೆಲವರು ತಾನು ಬಿಜೆಪಿ ಕಾರ್ಯಕರ್ತನೇ ಅಲ್ಲ ಅನ್ನುವ ಪ್ರಚಾರ ಮಾಡಿದ್ದಾರೆ. ಪಕ್ಷಕೋಸ್ಕರ, ಸಂಘಟನೆಗೋಸ್ಕರ ದುಡಿದದ್ದು ಸಂಘದ ಹಿರಿಯರಿಗೆ ತಿಳಿದಿದೆ. ಅದಾಗ್ಯೂ ನನ್ನ ಸ್ಪರ್ಧೆಗೆ ಹಿಂದುತ್ವದ ಹೋರಾಟವನ್ನು ಬಳಸಿಕೊಂಡು ಅಡ್ಡಿ ಉಂಟು ಮಾಡುವ ಪ್ರಯತ್ನ ಮಾಡುವುದಿದ್ದರೆ ಅಂತಹವರಿಗೆ ದೇವರೇ ಉತ್ತರ ನೀಡುತ್ತಾನೆ ಎಂದರು.

Leave a Reply

error: Content is protected !!