ಪಡುಬೆಟ್ಟು: ದ.ಕ.ಜಿ.ಪಂ. ಹಿ. ಪ್ರಾ. ಶಾಲೆ ಪಡುಬೆಟ್ಟು ಇಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 132 ನೇ ಜಯಂತಿಯನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಚಾಲನೆ ನೀಡಲಾಯಿತು.
ಮುಖ್ಯ ಗುರುಗಳಾದ ಶ್ರೀಮತಿ ಜೆಸ್ಸಿ ಕೆ. ಎ. ರವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ “ಅಂಬೇಡ್ಕರ್ ಅವರಂತೆ ನಾವು ಕೂಡ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು. ಅವರಂತೆ ನಮ್ಮ ಜೀವನದಲ್ಲಿ ಸಾಧನೆ ಮಾಡಬೇಕು” ಎಂದು ತಿಳಿಸಿದರು. ಸಹ ಶಿಕ್ಷಕಿಯಾದ ಮಮತಾ ಸಿ.ಹೆಚ್. ಅಂಬೇಡ್ಕರ್ ಜಯಂತಿಯ ಕುರಿತು ಮಕ್ಕಳಿಗೆ ಮಾಹಿತಿ ನೀಡಿ “ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಲು ಶ್ರಮಿಸುವುದರ ಜೊತೆಗೆ ಮಹಿಳೆಯರ ಸಮಾನತೆಗಾಗಿ ಕೂಡ ಹೋರಾಡಿದವರು. ಅವರ ಆದರ್ಶಗಳು ನಮಗೆ ದಾರಿದೀಪ” ಎಂದು ಹೇಳಿದರು.
ಸಹಶಿಕ್ಷಕಿ ಶ್ರೀಮತಿ ಸಜಿನ ಕೆ. ಎರೋಡಿ ವಂದಿಸಿದರು. ಸಹಶಿಕ್ಷಕಿ ಶ್ರೀಮತಿ ಲೀಲಾವತಿ, ಶ್ರೀಮತಿ ಕಮಲಾಕ್ಷಿ ಕೆ. ಶ್ರೀಮತಿ ಕವಿತಾ ಡಿ. ಅತಿಥಿ ಶಿಕ್ಷಕಿಯರಾದ ಶ್ರೀಮತಿ ನ್ಯಾನ್ಸಿ ಲಿಝಿ ಹಾಗೂ ಶ್ರೀಮತಿ ರಂಜಿನಿ ಕುಂದರ್ ಉಪಸ್ಥಿತರಿದ್ದರು.