ಧರ್ಮಸ್ಥಳ: ಹಟ್ಟಿಗೆ ನುಗ್ಗಿ ದನವನ್ನು ಕೊಂದು ತಿಂದ ಚಿರತೆ

ಶೇರ್ ಮಾಡಿ

ಬೆಳ್ತಂಗಡಿ, ಎ.18: ಧರ್ಮಸ್ಥಳ ಗ್ರಾಮದ ನೇರ್ತನೆ ಎಂಬಲ್ಲಿ ಮನೆಯ ಸಮೀಪವಿದ್ದ ದನದ ಹಟ್ಟಿಗೆ ನುಗ್ಗಿದ ಚಿರತೆ ಕಟ್ಟಿ ಹಾಕಿದ್ದ ದನವೊಂದನ್ನು ಕೊಂದು ತಿಂದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಇಲ್ಲಿನ ನಿವಾಸಿಯಾಗಿರುವ ತ್ರೇಸ್ಯಾಮ್ಮ ಪಿ.ಕೆ. ಎಂಬವರಿಗೆ ಸೇರಿದ ದನ ಇದಾಗಿದೆ. ತ್ರೇಸ್ಯಾಮ್ಮರ ಮನೆಯ ಸಮೀಪದ ಹಟ್ಟಿಯಲ್ಲಿದ್ದ ದನವನ್ನು ರಾತ್ರಿಯ ವೇಳೆ ಚಿರತೆ ಕೊಂದು ತಿಂದಿದೆ.
ತ್ರೇಸ್ಯಾಮ್ಮ ಅವರ ಮನೆ ಅರಣ್ಯದ ಸಮೀಪವೇ ಇದೆ. ಆಶಾ ಕಾರ್ಯಕರ್ತೆಯಾಗಿರುವ ಇವರು ಅತಿಸಣ್ಣ ಕೃಷಿಕರು ಆಗಿದ್ದು, ಹೈನುಗಾರಿಯೇ ಇವರಿಗೆ ಜೀವನೋಪಾಯವಾಗಿದೆ‌.
ನೇರ್ತನೆಯಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಹಾಗೂ ಆನೆಗಳ ಹಾವಳಿ ತುಂಬಾ ಹೆಚ್ಚಾಗಿದೆ. ಕೃಷಿಕರು ಆತಂಕದಲ್ಲಿಯೇ ಬದುಕಬೇಕಾದ ಸ್ಥಿತಿ ಎದುರಾಗಿದೆ ಎಂದು ಇಲ್ಲಿನ ಜನರು ಮಾಹಿತಿ ನೀಡಿದ್ದಾರೆ.
ಮುಂಡಾಜೆ ದುಂಬೆಟ್ಟು ಪರಿಸರದಲ್ಲಿ ಕೆಲ ದಿನಗಳ ಹಿಂದೆ ಚಿರತೆ ಕಾಣಿಸಿಕೊ‌ಡು ನಾಯಿಗಳನ್ನು ತಿಂದು ಹಾಕಿತ್ತು. ಆ ಪರಿಸರದಿಂದ ಚಿರತೆ ಇಲ್ಲಿಗೆ ಬಂದಿರಬಹುದು ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ‌. ಕಾಡುಪ್ರಾಣಿಗಳ ಉಪಟಳದಿಂದಾಗಿ ಸ್ಥಳೀಯ ಜನರು ರಾತ್ರಿ ಹಾಗೂ ಬೆಳಗ್ಗಿನ ಜಾವ ಮನೆಗಳಿಂದ ಹೊರ ಬರಲು ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ.

Leave a Reply

error: Content is protected !!