ಕಡಬ: ಗೋಳಿತ್ತೊಟ್ಟು ಗ್ರಾಮದ ಗ್ರಾಮಕರಣಿಕರೊಬ್ಬರು ಕಂಠ ಪೂರ್ತಿ ಕುಡಿದು ಬಾರ್ ಮುಂದೆಯೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಘಟನೆ ಕಡಬ ಸಮೀಪದ ಕಳಾರದಿಂದ ವರದಿಯಾಗಿದೆ.
ಎ.19 ರ ಸಂಜೆ ವೇಳೆ ಕಂಠ ಪೂರ್ತಿ ಕುಡಿದು ಬಿದ್ದಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ವಿಷಯ ತಿಳಿದ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳೇ ಕೆಲ ಸಮಯದ ಬಳಿಕ ಆತನನ್ನು ಮನೆಗೆ ತಲುಪಿಸಿರುವುದಾಗಿ ತಿಳಿದು ಬಂದಿದೆ.
ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೆ, ಪಾನಮತ್ತರಾಗಿಯೇ ಕಚೇರಿಗೆ ಬರುತ್ತಿರುವುದಾಗಿ ಗ್ರಾಮದ ಜನರು ಈ ಹಿಂದೆ ಆರೋಪಿಸಿದ್ದರು. ಈ ರೀತಿಯಾಗಿ
ಈತ ಪಾನಮತ್ತನಾಗಿ ಸಾರ್ವಜನಿಕ ಸ್ಥಳದಲ್ಲಿ ಬೀಳುತ್ತಿರುವುದರಿಂದ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮುಜುಗರಪಡುವಂತಾಗಿದೆ. ಈತನ ಮೇಲೆ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕಡಬ ಕಂದಾಯ ಇಲಾಖೆಯ ಗೋಳಿತ್ತೊಟ್ಟು ಗ್ರಾಮ ವ್ಯಾಪ್ತಿಯ ಗ್ರಾಮಕರಣಿಕ ಎಂದು ಸುದ್ದಿಗಳು ಹರಿದಾಡುತ್ತಿದೆ.
15 ದಿನಗಳ ಹಿಂದೆಯಷ್ಟೇ ಕುಡಿದು ಬಿದ್ದು ಕಣ್ಣಿಗೆ ಗಾಯವಾಗಿ ಬಿದ್ದು ಮಂಗಳವಾರ ವಷ್ಟೇ ಆಸ್ಪತ್ರೆ ಯಿಂದ ಬಿಡುಗಡೆ ಆಗಿ ಕಡಬಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ.