2nd PUC ಫಲಿತಾಂಶ ಪ್ರಕಟ: ಶೇ 74.64 ವಿದ್ಯಾರ್ಥಿಗಳು ಉತ್ತೀರ್ಣ, ದ. ಕನ್ನಡ ಪ್ರಥಮ

ಶೇರ್ ಮಾಡಿ

ಬೆಂಗಳೂರು: 2022-23ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಪ್ರಕಟವಾಗಿದೆ. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯು ಮಾರ್ಚ್ 9ರಿಂದ 29ರವರೆಗೆ ನಡೆದಿತ್ತು.

ಈ ಬಾರಿ ಶೇ 74.64 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ 61.22 ಶೇ ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ ಶೇ.85.71 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ ಶೇ.75.89 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಡುಪಿ ದ್ವಿತೀಯ, ಕೊಡಗು ತೃತೀಯ ಮತ್ತು ಉತ್ತರ ಕನ್ನಡ ನಾಲ್ಕನೇ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಈ ಬಾರಿ ಒಂದು ಬದಲಾವಣೆ ಮಾಡಲಾಗಿದ್ದು, ಮರು ಮೌಲ್ಯಮಾಪನದಲ್ಲಿ ಕನಿಷ್ಠ ಒಂದು ಮಾರ್ಕ್ ಬದಲಾವಣೆಯಾದರೂ ಅದನ್ನು ಮಾರ್ಕ್ ಕಾರ್ಡ್ ನಲ್ಲಿ ಅಳವಡಿಸಲಾಗುವುದು.

https://karresults.nic.in ಮೂಲಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ವೀಕ್ಷಿಸಬಹುದು.

ರಾಜ್ಯದಲ್ಲಿ ಮೊದಲ ರ‍್ಯಾಂಕ್‌ ಪಡೆದವರು:

ಕಲಾ : ತಬಸುಮ್ ಶೇಕ್, ಜಯನಗರ ಬೆಂಗಳೂರು

ವಾಣಿಜ್ಯ: ಅನನ್ಯಾ, ಆಳ್ವಾಸ್ ಮೂಡಬಿದಿರೆ

ವಾಣಿಜ್ಯ: ಕೌಶಿಕ್

Leave a Reply

error: Content is protected !!