ನೆಲ್ಯಾಡಿ: 2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ಪಿಯು ಕಾಲೇಜಿಗೆ ಶೇ.95 ಫಲಿತಾಂಶ ಲಭಿಸಿದೆ. ಕಾಲೇಜಿನಿಂದ ಒಟ್ಟು 98 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 94 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು 29 ವಿದ್ಯಾರ್ಥಿಗಳಲ್ಲಿ 29 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ಫಲಿತಾಂಶ ಲಭಿಸಿದೆ.
ಒಟ್ಟು 12 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ವಾಣಿಜ್ಯ ವಿಭಾಗದಿಂದ ಶೆರ್ವಿನ್ ಶಾಜಿ(584), ರಾಯಲ್ ಬಿನೋಯ್(562), ವಿಭಾಶ್ರೀ(554), ಮಹಮ್ಮದ್ ರಾಫಿ(550), ಸಮೀಕ್ಷಾ ಎಸ್ ಎಮ್ (531), ವಿಂಧ್ಯಾ(515) ಹಾಗೂ ವಿಜ್ಞಾನ ವಿಭಾಗದಿಂದ ಅಶ್ವಥ್ ಜಾನ್(529), ಜೀನಾ.ಎ.ಕೆ(522), ಫಾತಿಮಾ ಪಾಸಿಲ(522), ಶ್ರೇಯಾ ಜೋಸೆಫ್(518), ನಿಶಾ(518) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಉಳಿದಂತೆ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ 16 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 6 ವಿದ್ಯಾರ್ಥಿಗಳು, ತೃತೀಯ ಶ್ರೇಣಿಯಲ್ಲಿ 1 ವಿದ್ಯಾರ್ಥಿ ಹಾಗೂ ವಿಜ್ಞಾನ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ 34 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.