ಮಧ್ಯ ವಯಸ್ಸಿನವರಲ್ಲೇ ಹಾರ್ಟ್ ಅಟ್ಯಾಕ್, ಡಯಾಬಿಟಿಸ್ ಏಕೆ?

ಶೇರ್ ಮಾಡಿ

ಹೃದಯ ರೋಗ ತಜ್ಞರು ಹೇಳುವಂತೆ. ಮನುಷ್ಯನ ಪ್ರಾಣ ನೀರಿನ ಮೇಲಿನ ಗುಳ್ಳೆಯಂತೆ ಎನ್ನುವ ಮಾತಿದೆ. 45 ರಿಂದ 50 ವರ್ಷ ದಾಟಿದ ಹಿರಿಯರಲ್ಲಿ ಕಾಣಿಸಿಕೊಳ್ಳಬೇಕಾಗಿದ್ದ ಅದೆಷ್ಟೋ ಕಾಯಿಲೆಗಳು ಇಂದು 18 ವರ್ಷ ದಾಟುತ್ತಿದ್ದಂತೆ ಜನರನ್ನು ಕಾಡುತ್ತಿವೆ. 30 ವರ್ಷದ ಆಸುಪಾಸಿನ ಜನರಲ್ಲಿ ಇಂದು ಬಿಪಿ, ಶುಗರ್, ಹಾರ್ಟ್ ಅಟ್ಯಾಕ್ ಎನ್ನುವ ಹಲವಾರು ಕಾಯಿಲೆ ಗಳನ್ನು ಗಮನಿಸುತ್ತಿದ್ದೇವೆ. ತುಂಬಾ ಚಿಕ್ಕ ವಯಸ್ಸಿನ ಜನರಲ್ಲಿ ಈ ರೀತಿ ಆಗುತ್ತಿರುವುದು ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತದೆ.

20 ವರ್ಷದ ಹಿಂದೆ ಹೃದಯಘಾತದ ವ್ಯಕ್ತಿಗಳು ಎಂದರೆ 55 ರಿಂದ 60 ವರ್ಷದ ಒಳಗಿನ ಪುರುಷರು ಮತ್ತು 60 ರಿಂದ 65 ವರ್ಷದ ಒಳಗಿನ ಮಹಿಳೆಯರು. 2010ರಲ್ಲಿ 40 ರಿಂದ 45 ವರ್ಷದ ಜನರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಲು ಶುರುವಾಯಿತು.
ಆದರೆ 2020 ಕಳೆದ ನಂತರದಲ್ಲಿ ಕೇವಲ 30 ರಿಂದ 35 ವರ್ಷದ ಒಳಗಿನ ಜನರಲ್ಲಿ ಹಾರ್ಟ್ ಅಟ್ಯಾಕ್ ಜೊತೆಗೆ ಬೋನಸ್ ರೂಪದಲ್ಲಿ ಬಿಪಿ ಮತ್ತು ಶುಗರ್ ಅನ್ನು ಸಹ ನಾವು ನೋಡುತ್ತಿದ್ದೇವೆ.

ಆರೋಗ್ಯಕಾರಿ ಜೀವನ ಶೈಲಿಗೆ ಐದು ಸೂತ್ರಗಳು
ದೈನಂದಿನ ಆಹಾರ ಪದಾರ್ಥಗಳಿಗೆ ಆದಷ್ಟು ಉಪ್ಪಿನಾಂಶವನ್ನು ಕಡಿಮೆ ಮಾಡಿಕೊಳ್ಳಿ. ಅಂದ್ರೆ ರುಚಿಗೆ ತಕ್ಕಷ್ಟು ಉಪ್ಪು ಅಡುಗೆಗೆ ಬಳಸಿದರೆ ಸಾಕು. ಆಹಾರ ತಯಾರಿಸುವಾಗ ಜಾಸ್ತಿ ಉಪ್ಪನ್ನು ಬಳಸಬೇಡಿ, ಅಥವಾ ಜಾಸ್ತಿ ಉಪ್ಪಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಡಿ
ಸಂಸ್ಕರಿಸಿದ, ಪ್ಯಾಕೆಟ್ ತಿಂಡಿಗಳು (ಉದಾಹರಣೆಗೆ ಆಲೂಗಡ್ಡೆ ಚಿಪ್ಸ್) ಶೇಖರಿಸಲ್ಪಟ್ಟ ಆಹಾರ ಪದಾರ್ಥಗಳ ಬದಲು, ತಾಜಾ ಆಹಾರ ಬಳಸಿ. ನಿಮಗೆ ಗೊತ್ತಿರಲಿ ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಉಪ್ಪಿನಾಂಶ ಹೆಚ್ಚಾಗಿರುವುದರಿಂದ, ಹೃದಯಕ್ಕೆ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಹೃದಯ ಆರೋಗ್ಯಕ್ಕೆ ಹಾಗೂ ದೀರ್ಘಕಾಲದ ಕಾಯಿಲೆಗಳಾದ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳಿಂದ ದೂರವಿರಬೇಕು ಎಂದರೆ, ದೈಹಿಕ ಚಟುವಟಿಕೆಯೂ ಅಷ್ಟೇ ಮುಖ್ಯವಾಗಿರುತ್ತದೆ. ಹಾಗಾಗಿ ಪ್ರತಿದಿನ ಲಘು ವ್ಯಾಯಾಮ, ಯೋಗಾಭ್ಯಾಸ, ಜಾಗಿಂಗ್, ನಡಿಗೆ, ಇಂತಹ ಆರೋಗ್ಯಕಾರಿ ಅಭ್ಯಾಸಗಳನ್ನು ದಿನಾ ಅನುಸರಿಸುವುದರಿಂದ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ಇಂತಹ ದೀರ್ಘಕಾಲದ ಕಾಯಿಲೆಯಿಂದ ದೂರವಿರಬಹುದು.

ಇವೆಲ್ಲದರ ಜೊತೆಗೆ ದೈನಂದಿನ ಒತ್ತಡದ ಜೀವನದಿಂದ ಹೊರ ಬರಲು, ಪ್ರಾಣಾಯಾಮ, ಧ್ಯಾನ, ಮನಸ್ಸಿಗೆ ಮುದ ನೀಡುವ ಸಂಗೀತ ಕೇಳುವುದು, ಇಂತಹ ಮನಸ್ಸಿಗೆ ನೆಮ್ಮದಿ ಕೊಡುವ ಕೆಲವೊಂದು ಆರೋಗ್ಯಕಾರಿ ಚಟುವಟಿಕೆಗಳು ದಿನನಿತ್ಯದ ಅಭ್ಯಾಸ ಮಾಡಿಕೊಂಡರೆ, ಮನಸ್ಸಿಗೆ ನೆಮ್ಮದಿ ಸಿಗುವುದರ, ಜೊತೆಗೆ ಬಿಪಿ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ದೂರವಾಗುತ್ತದೆ.

2022-23ರ ಶೈಕ್ಷಣಿಕ ವರ್ಷದಲ್ಲಿ 270 ಕರ್ತವ್ಯದ ದಿನಗಳಿದ್ದವು. ಆದರೆ ಈ ವರ್ಷ 244 ಶಾಲಾ ದಿನಗಳು ಇವೆ. ಹಿಂದಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಶಾಲಾ ಕರ್ತವ್ಯ ದಿನಗಳಲ್ಲಿ ಭಾರೀ ಕಡಿತವಾಗಿದೆ. ಅದೇ ರೀತಿ ಕಲಿಕಾ ದಿನಗಳಲ್ಲಿಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯವಾಗಿ 48 ದಿನಗಳಷ್ಟು ಕಡಿಮೆಯಾಗಿವೆ.

Leave a Reply

error: Content is protected !!