





ಕಡಬ: ಕೋಡಿಂಬಾಳ ಗ್ರಾಮದ ಕಾರ್ಣಿಕ ಕ್ಷೇತ್ರ ಮಜ್ಜಾರು ಹಾಗೂ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನದ ಕೊರಗಜ್ಜನ ಸನ್ನಿಧಿಯಲ್ಲಿ ಹಿಂದೂ ಸಂಘಟನೆಯ ಮುಖಂಡ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಪ್ರಾರ್ಥನೆ ಸಲ್ಲಿಸಿದರು.

ಅರುಣ್ ಕುಮಾರ್ ಪುತ್ತಿಲ ಕೋಡಿಂಬಾಳ ಕಾರ್ಣಿಕ ಕ್ಷೇತ್ರ ಸನ್ನಿಧಿಗೆ ಭೇಟಿ ನೀಡುವ ವಿಚಾರ ತಿಳಿದ ಕಡಬ ಭಾಗದ ಪುತ್ತಿಲ ಅಭಿಮಾನಿ ಕ್ಷೇತ್ರಕ್ಕೆ ಆಗಮಿಸಿ ಪುತ್ತಿಲ ಅವರಿಗೆ ಶುಭ ಹಾರೈಸಿದರು.

ಬಳಿಕ ಪುತ್ತಿಲ ಶ್ರೀ ರಾಮ ಭಜನಾ ಮಂದಿರದಲ್ಲಿ ಅಭಿಮಾನಿ ಬಳಗದ ಜೊತೆ ಮಾತನಾಡಿ, ವಿಧಾನಸಭೆಯಲ್ಲಿ ಕಾರ್ಯಕರ್ತರ ಧ್ವನಿ ಮೊಳಗಬೇಕಾದರೆ ಕಾರ್ಯಕರ್ತರ ನೋವು ನಲಿವು ಅರಿತಿರುವ ಸಂಘಟನೆಯಲ್ಲಿ ದುಡಿಯುವವರಿಗೆ ಅವಕಾಶ ಸಿಗಬೇಕು. ಅವಕಾಶ ಸಿಗದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಆಶಯದಂತೆ ಪಕ್ಷೇತರನಾಗಿ ಸ್ಪರ್ಧಿಸಿದ್ದೇನೆ. ಹಿಂದುತ್ವದ ಧ್ವನಿಯನ್ನು ಮತ್ತೆ ಮುನ್ನಲೆಗೆ ತಂದು ಜನರ ಧ್ವನಿಯಾಗಿ ಕೆಲಸ ಕೆಲಸ ಮಾಡುವುದಾಗಿ ತಿಳಿಸಿದರು.