ಎ.26: ನೆಲ್ಯಾಡಿ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಲೀಜನ್ ನ ನೂತನ ಪದಾಧಿಕಾರಿಗಳ ಪದಗ್ರಹಣ

ಶೇರ್ ಮಾಡಿ

ನೆಲ್ಯಾಡಿ: ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜನ್ ನ 2023-24ನೇ ಸಾಲಿನ ನೂತನ ಅಧ್ಯಕ್ಷ ಸೀನಿಯರ್ ನಾರಾಯಣ ಎನ್ ಬಲ್ಯ ಹಾಗೂ ತಂಡದ ಪದಗ್ರಹಣ ಸಮಾರಂಭ ಎ.26ರಂದು ಸಂಜೆ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ನ್ಯೂ ಮಿಲೆನಿಯಂ ಹಾಲ್‌ನಲ್ಲಿ ನಡೆಯಲಿದೆ.

ಅತಿಥಿಯಾಗಿ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಇದರ ಪೂರ್ವಾಧ್ಯಕ್ಷ ಸೀನಿಯರ್ ಡಾ.ಕೇದಿಗೆ ಅರವಿಂದ ರಾವ್ ಭಾಗವಹಿಸಲಿದ್ದಾರೆ. ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ನ ರಾಷ್ಟ್ರೀಯ ಉಪಾಧ್ಯಕ್ಷ ಸೀನಿಯರ್ ಜಿ.ಕೆ.ಹರಿಪ್ರಸಾದ್ ರೈ ಯವರು ಪದಗ್ರಹಣ ನೆರವೇರಿಸಲಿದ್ದಾರೆ. ರಾಷ್ಟ್ರೀಯ ನಿರ್ದೇಶಕ ಸೀನಿಯರ್ ಚೈತ್ರ ಕುಮಾರ್, ರಾಷ್ಟ್ರೀಯ ಸಂಯೋಜಕ ಸೀನಿಯರ್ ಡಾ.ಸದಾನಂದ ಕುಂದರ್‌ ರವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು 2022-23ನೇ ಸಾಲಿನ ಅಧ್ಯಕ್ಷ ಸೀನಿಯರ್ ವೆಂಕಟ್ರಮಣ ಆರ್ ಪ್ರಕಟಣೆಯಲ್ಲಿ ತಿಳಿಸಿದರು.

Leave a Reply

error: Content is protected !!