ಬೈಕ್ ಸ್ಕಿಡ್ ಆಗಿ ಸ್ಥಳದಲ್ಲೇ ಸವಾರ ನಿಧನ

ಶೇರ್ ಮಾಡಿ

ಕಡಬ : ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಂಜ ರಸ್ತೆಯ ಕಲ್ಲಂತಡ್ಕ ಎಂಬಲ್ಲಿ ಎ.25ರಂದು ರಾತ್ರಿ ನಡೆದಿದೆ.

ಮೃತ ಸವಾರನನ್ನು ದಾವಣಗೆರೆ ಮೂಲದ ಪ್ರಸ್ತುತ ಕೋಡಿಂಬಾಳದಲ್ಲಿ ವಾಸವಿರುವ ಮಂಜು ಎಂದು ಗುರುತಿಸಲಾಗಿದೆ.
ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಮಂಜು ಬೈಕಿನಲ್ಲಿ ಕೋಡಿಂಬಾಳ ಕಡೆಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕ್ ರಸ್ತೆಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!