ನೆಲ್ಯಾಡಿ ವಿಶ್ವವಿದ್ಯಾಲಯ ಕಾಲೇಜು ನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

ಶೇರ್ ಮಾಡಿ

ನೆಲ್ಯಾಡಿ ವಿಶ್ವವಿದ್ಯಾಲಯ ಕಾಲೇಜು ನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ದಿನಾಂಕ- 26/04/2023 ಬುಧವಾರದಂದು ನಡೆಯಿತು

ಮಹಾಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಸಂಯೋಜಕರಾದ ಡಾ.ಸುರೇಶ್ ಇವರು ವಹಿಸಿಕೊಂಡು ಅಧ್ಯಕ್ಷೀಯ ನುಡಿಗಳನ್ನಾಡಿ, ಶಿಕ್ಷಕ ರಕ್ಷಕ ಸಂಘದ ಮಹತ್ವವನ್ನು ಉಲ್ಲೇಖಿಸುವುದರೊಂದಿಗೆ ಕಾಲೇಜಿನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಶ್ರೀಮತಿ ವೆರೋನಿಕಾ ಪ್ರಭಾ ವಿ. ಪಿ., ಖಜಾಂಚಿ ಶಿಕ್ಷಕ- ರಕ್ಷಕ ಸಂಘ, ಇವರು 2022-2023ರ ಸಾಲಿನ ಲೆಕ್ಕ ಪತ್ರ ಮಂಡನೆ ಮಾಡಿದರು. ಈ ಆಯವ್ಯಯ ಪಟ್ಟಿಯನ್ನು ಸಭೆಯು ಅನುಮೋದಿಸಿತು. ಮುಂದೆ ಪೋಷಕರ ನೂತನ ಪದಾಧಿಕಾರಿಗಳ ನೇಮಕವಾಯಿತು.
ಕಾರ್ಯಾಧ್ಯಕ್ಷರಾಗಿ ಅಬ್ದುಲ್ ಖಾದರ್ ಎಂ., ಉಪಾಧ್ಯಕ್ಷರಾಗಿ ಶ್ರೀಮತಿ ಮಧುರಾ ಕೆ., ಸಹ ಕಾರ್ಯದರ್ಶಿಯಾಗಿ ರವಿ. ಎಸ್, ಸದಸ್ಯರುಗಳಾಗಿ ಶಿವಣ್ಣ, ಶ್ರೀಮತಿ ಪಾರ್ವತಿ ಹಾಗೂ ನಾಗೇಶ ಇವರು ಅವಿರೋಧವಾಗಿ ಆಯ್ಕೆಗೊಂಡರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಶಿಕ್ಷಕರ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ಡಾ.ಸೀತಾರಾಮ ಪಿ. ಸ್ವಾಗತಿಸಿದರು. ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ಶ್ರೀಮತಿ ನಿಶ್ಮಿತಾ ಪಿ. ಧನ್ಯವಾದಗಳನ್ನು ಸಮರ್ಪಿಸಿದರು. ಕುಮಾರಿ ಡೀನಾ. ಪಿ. ಪಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿಗಳು, ಪೂರ್ವ ಕಾರ್ಯಾಧ್ಯಕ್ಷರಾದ ಅಬ್ದುಲ್ ರಜಾಕ್ ಕೆಮ್ಮಾನ್, ಸಹ ಕಾರ್ಯದರ್ಶಿಯಾದ ನವೀನ್ ಆಚಾರಿ, ಸದಸ್ಯರಾದ ಶ್ರೀಮತಿ ದಿವ್ಯಾ, ಶ್ರೀಮತಿ ಪರಮೇಶ್ವರಿ, ಶ್ರೀಮತಿ ರಾಜೇಶ್ವರಿ ಉಪಸ್ಥಿತರಿದ್ದರು.

Leave a Reply

error: Content is protected !!